ಪ್ರೊ| ಕೆ. ಎಂ. ಲೋಕನಾಥ್ ರೈ ಮಾಡಾವುರವರಿಗೆ ಅಂತರ್ ರಾಷ್ಟ್ರೀಯ ಅತ್ಯುತ್ತಮ ಸಂಶೋಧಕ ಪ್ರಶಸ್ತಿ

0

ಸಹಕಾರಿ ರತ್ನ ಸವಣೂರು ಕೆ.‌ ಸೀತಾರಾಮ ರೈವರ ಪತ್ನಿಯ ಸಹೋದರ ಕೆಯ್ಯೂರು ಗ್ರಾಮದ ಮಾಡಾವು ಪ್ರೊ| ಕೆ. ಎಂ. ಲೋಕನಾಥ್ ರೈ ಅವರು ಪ್ರತಿಷ್ಠಿತ ಅಂತರ್ರಾಷ್ಟ್ರೀಯ ವೇದಿಕೆಯಾದ ಸೈಂಟಿಫಿಕ್ ಲಾರೆಲ್ಸ್‌ನಿಂದ ಅತ್ಯುತ್ತಮ ಸಂಶೋಧಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೆಯ್ಯೂರು ಹಾಗೂ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಬೆಳ್ಳಾರೆಯಲ್ಲಿ ಪೂರೈಸಿ, ಪದವಿಯನ್ನು ಒಂದು ವರ್ಷ ಹರಿಹರ ಎಸ್‌ಜೆವಿಪಿ ಕಾಲೇಜ್‌ನಲ್ಲಿ ೨ ವರ್ಷ ಪುತ್ತೂರು ಸಂತ ಫಿಲೋಮಿನಾ ಕಾಲೇಜ್‌ನಲ್ಲಿ ಮಾಡಿರುತ್ತಾರೆ. ೧೯೭೬-೭೮ರಲ್ಲಿ ಮೈಸೂರಿನಲ್ಲಿ ಎಂಎಸ್‌ಇ ಮಾಡಿದ ಬಳಿಕ ೫ ವರ್ಷ ಪಿಎಚ್‌ಡಿಯನ್ನು ಮಾಡಿದ್ದಾರೆ. ೧೯೮೨ ರಿಂದ ೨೦೧೬ ರತನಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ, ಒಟ್ಟು ೩೪ ವರ್ಷ ಕಾಲ ಸೇವೆ ಸಲ್ಲಿಸಿ, ೨೦೧೬ರಲ್ಲಿ ನಿವೃತ್ತರಾದರು.


ನಿವೃತ್ತಿ ಬಳಿಕ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವನ್ನು ಬರೆಯುತ್ತಿದ್ದಾರೆ. ಲೋಕನಾಥ ರೈಯವರಿಗೆ ೨೦೧೮ ರಲ್ಲಿ ಭಾರತರತ್ನ ಡಾ| ರಾಧಾಕೃಷ್ಣನ್ ಗೋಲ್ಡ್ ಮೆಡೆಲ್' ಅವಾರ್ಡ್, ೨೦೧೯ ರಲ್ಲಿಭಾರತರತ್ನ ಡಾ| ಅಬ್ದುಲ್ ಕಲಾಂ ಗೋಲ್ಡ್ ಮೆಡೆಲ್’ ಅವಾರ್ಡ್ ಹಾಗೂ ೨೦೨೦ರಲ್ಲಿ ಲೈಫ್ ಟೈಮ್ ಅಚೀವ್‌ಮೆಂಟ್ ವಿಡಿಗುಡ್ ಇಂಟರ್ ನ್ಯಾಶನಲ್ ಸೈಂಟಿಸ್ಟ್ ಅವಾರ್ಡ್‌ಅನ್ನು ಪಡೆದಿರುತ್ತಾರೆ.
ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಇವರ ಪ್ರವರ್ತಕ ಕೊಡುಗೆಗಳು ಮತ್ತು ವೈಜ್ಞಾನಿಕ ಸಂಶೋಧನೆಗೆ ಬದ್ಧತೆಯು ಪ್ರಪಂಚದಾದ್ಯಂತದ ಅಸಂಖ್ಯಾತ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಸ್ಫೂರ್ತಿಯನ್ನು ತುಂಬಿದೆ.
ಮಾಡಾವುಬೈಲಮೂಲೆ ಹುಕ್ರಪ್ಪ ರೈ-ದೇವಕಿಯವರ ಪುತ್ರನಾಗಿರುವ ಲೋಕನಾಥ ರೈಯವರ ಪತ್ನಿ ವಿಜಯಲಕ್ಷ್ಮಿ ಎಲ್ ರೈ, ಪುತ್ರ ವಿಕ್ರಮ್ ಎಲ್ ರೈಯವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಾಗೂ ಇನ್ನೋರ್ವ ಪುತ್ರ ಪ್ರೀತಮ್ ಎಲ್ ರೈಯವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗಿಯಾಗಿರುತ್ತಾರೆ. `ಸಹಕಾರ ರತ್ನ’ ಸವಣೂರು ಕೆ.ಸೀತಾರಾಮ ರೈಯವರ ಪತ್ನಿ ಕಸ್ತೂರಿಕಲಾ ಎಸ್.ರೈರವರ ಸಹೋದರನಾಗಿರುವ ಪ್ರೊ| ಕೆ. ಎಂ. ಲೋಕನಾಥ್ ರೈರವರು ಪ್ರಸ್ತುತ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ.