ಸುಳ್ಯ ನಗರ ಪಂಚಾಯತ್ ವತಿಯಿಂದ ಹಣಕಾಸು ಸಾಕ್ಷರತಾ ಮತ್ತು ಜನಸುರಕ್ಷಾ ಸಂಪುರ್ಣತಾ ಅಭಿಯಾನ

0

ಸುಳ್ಯ ಕೆನರಾ ಬ್ಯಾಂಕ್ ಸುಳ್ಯಶಾಖೆಯ ವತಿಯಿಂದ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ” ಜನ ಸಾಮಾನ್ಯರಿಗೆ ಕೈಗೆಟುವ ಕನಿಷ್ಠ ವಾರ್ಷಿಕ ವಂತಿಗೆಯ ವಿಮಾ ಯೋಜನೆಗಳಾಗಿದ್ದು ಇದು ನಗರ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು. ಮತ್ತು ಈ ಯೋಜನೆಯನ್ನು ಸ್ವಸಹಾಯ ಸಂಘದ ಸದಸ್ಯರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ನೋಂದಣಿ ಮಾಡುವ ಕಾರ್ಯಕ್ರಮ ಜು 18 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

PMJJBY ಹಾಗೂ PMSBY ಮಹಾ ಲಾಗಿನ್ ದಿವನ ವನ್ನಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸುಳ್ಯ ನಗರ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಎ ನೀರಬಿದರೆ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷರಾದ ಬುದ್ದನಾಯ್ಕ ಜಿ,ನ ಪಂ ಸದಸ್ಯರುರು ಗಳಾದ ಶ್ರೀಮತಿ ಶೀಲಾ ಅರುಣ್ ಕುರುಂಜಿ, ತಾಲೂಕು ಪಂಚಾಯತಿನ ಕಾರ್ಯನಿರ್ವಣಾಧಿಕಾರಿ ರಾಜಣ್ಣ, ಕೆನರಾ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಅಜೀಣ್ ಸಾಮ್ಯೂವೆಲ್ ಇವರುಗಳು ಉಪಸ್ಥಿತರಿದ್ದರು.

ಅಮೂಲ್ಯ ಆರ್ಥಿಕ ಸಾಕ್ಷರತ ಕೇಂದ್ರ ಕೆನರಾ ಬ್ಯಾಂಕ್ ಸುಳ್ಯ ಇದರ ಸಮಾಲೋಚಕಿ ಶ್ರೀಮತಿ ಸುಜಾತಾ ರವರು ಕೇಂದ್ರ ಪಿಎಂ ಜನಧನ ಯೋಜನೆ, ಆಟಲ್ ಪಿಂಚಣಿ ಯೋಜನೆ, ಪಿಎಂ ಜೀವನಜ್ಯೋತಿ ವಿಮಾ ಯೋಜನೆ, ಪಿಎಂ ಸುರಕ್ಷಾ ವಿಮಾ ಯೋಜನೆ, ಡಿಜಿಟಲ್ ಹಣಕಾಸು ವಂಚನೆ ಪ್ರಕರಣಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ಹಲವಾರು ವಿಷಯಗಳ ಕುರಿತು ಹಣಕಾಸು ಸಮಾಲೋಚಕರು ಮಾಹಿತಿ ತಿಳಿಸಿದರು.

ನ ಪಂ ಸಮುದಾಯ ಸಂಘಟಕಿ ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.