ಬೆಂಗಳೂರಿನ ಪ್ಲೋರಿಡಾ ಸಮೂಹ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದ್ದ ರಜತ ಮಹೋತ್ಸವದ ಅಂಗವಾಗಿ ಕರ್ನಾಟಕ ಜ್ಯೋತಿ ಪುರಸ್ಕಾರ ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಚಂದ್ರ ಕೋಲ್ಚಾರ್ ಹಾಗೂ ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಅವರಿಗೆ ಲಭಿಸಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಪ್ಲೋರಿಡಾ ಶಿಕ್ಷಣ ಸಂಸ್ಥೆಯಲ್ಲಿ ಆಡಳಿತ ಅಧಿಕಾರಿಯಾಗಿರುವ ಸೋಮಸುಂದರ ಬೆಂಗಳೂರು ಜು.19 ರಂದು ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ಸಹಕಾರ ರತ್ನ ಚಂದ್ರ ಕೋಲ್ಚಾರ್ ಹಾಗೂ ಕೆ ಟಿ ವಿಶ್ವನಾಥರವರಿಗೆ ಕರ್ನಾಟಕ ಜ್ಯೋತಿ ರಾಜ್ಯ ಪುರಸ್ಕಾರ ನೀಡಿದರು.








ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ. ಜನರಲ್ ಮ್ಯಾನೇಜರ್ ಚಂದ್ರಶೇಖರ್ ಮೇರ್ಕಜೆ, ಗುತ್ತಿಗಾರ್ ರಬ್ಬರ್ ಸೊಸೈಟಿ ಸುಳ್ಯ ಶಾಖಾ ವ್ಯವಸ್ಥಾಪಕರಾದ ವಿಜಯ ವಾಲ್ತಾಜೆ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮನೋಜ್ ಪಾನತ್ತಿಲ, ಸಿಬ್ಬಂದಿಗಳಾದ ಜಗದೀಶ ಗೌಡ ಕಲ್ಕಳ, ಸುರೇಶ್ ಎಂ ಹಾಗೂ ಕಾರ್ತಿಶ್ ಕೆ ಎಸ್ ಉಪಸ್ಥಿತರಿದ್ದರು.










