ನಿಂತಿಕಲ್ಲಿನಲ್ಲಿ ಅನಂತ ಶ್ರೀ ಕ್ಲಿನಿಕ್ ಮತ್ತು ಕ್ಲಿನಿಕಲ್ ಲ್ಯಾಬೋಟರಿ ಶುಭಾರಂಭ

0

ನಿಂತಿಕಲ್ಲಿನ ಸಾನಿಧ್ಯ ಕಾಂಪ್ಲೆಕ್ಸ್‌ನಲ್ಲಿ ಡಾ. ಅರಿಹಂತ್ ಆರಿಗ ಆರ್.ರವರ ಮಾಲಕತ್ವದ ಅನಂತ ಶ್ರೀ ಕ್ಲಿನಿಕ್ ಮತ್ತು ಕ್ಲಿನಿಕಲ್ ಲ್ಯಾಬೋಟರಿ ಶುಭಾರಂಭ ಗೊಂಡಿದೆ. ಪುರೋಹಿತರಾದ ಜಿವೇಂದ್ರ ಇಂದ್ರರವರು ವೈದಿಕ ಕಾರ್ಯಕ್ರಮ ನಡೆಸಿದರು.
ಸುಳ್ಯ ತಾಲೂಕು ಟಿ ಹೆಚ್ ಓ ಡಾಕ್ಟರ್ ವಿ.ಕೆ. ತ್ರಿಮೂರ್ತಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಹೇಮಲತಾ ರಾಜರತ್ನ ಆರಿಗ ಕುಳವಳಿಕೆ, ಆರ್.ಜಿನ ಪ್ರಕಾಶ್ ಆರಿಗ, ರತ್ನತ್ರಯ ನಿಲಯ ಕುಳವಳಿಕೆ ಕುಟುಂಬಸ್ಥರು ಹಾಗೂ ಸ್ಥಳಿಯರು, ಹಿತೈಷಿಗಳು, ಕಾಂಪ್ಲೆಕ್ಸ್ ಮಾಲಕ ತಿಮ್ಮಪ್ಪ ಗೌಡ ಮಲ್ಲಾರ, ನಿಂಕಲ್ಲು ವರ್ತಕರು ಉಪಸ್ಥಿತರಿದ್ದರು.

ಇಲ್ಲಿ ವೈದ್ಯಕೀಯ ಸೌಲಭ್ಯಗಳು, ಅಸಿಡಿಟಿ, ಕೀಲು ನೋವು, ವಾತ, ಸೊಂಟ ನೋವು, ಪಿಸಿಒಡಿ, ಥೈರಾಯಿಡ್ ಸಮಸ್ಯೆ, ಬೊಜ್ಜು, ಮುಟ್ಟಿನ ಸಮಸ್ಯೆ, ಮೂತ್ರಪಿಂಡದಲ್ಲಿ ಕಲ್ಲು, ಸೂರಿಯಾಸಿಸ್, ಬಿಳಿ ತಣ್ಣು, ಸಕ್ಕರೆ ಕಾಯಿಲೆ, ಬಿಪಿ, ಅಧಿಕ ಕೊಲೆಸ್ಟ್ರಾಲ್, ಚರ್ಮರೋಗ, ಅಸ್ತಮಾ, ಅಲರ್ಜಿ, ಮೈಗ್ರೇನ್, ಬೆನ್ನು ನೋವಿನ ಸಮಸ್ಯೆ, ಗಂಟು ನೋವು, ನರ ರೋಗಗಳು, ಕೀಲು ರೋಗಗಳು, ಸ್ತ್ರೀ ಸಂಬಂಧಿತ ಕಾಯಿಲೆಗಳು, ಬಂಜೆತನ, ಸ್ತ್ರೀ ಪುರುಷ ಲೈಂಗಿಕ ಸಮಸ್ಯೆ, ಮಾನಸಿಕ ಒತ್ತಡ, ತಲೆ ಕೂದಲು ಉದುರುವುದು, ಪಕ್ಷಪಾತ, ಮುಖದ ಕಲೆ, ಮೊಡವೆ, ವಿವಿಧ ಗಾಯದ ತೊಂದರೆಗಳಿಗೆ ಸೇವೆಗಳು ಲಭ್ಯ. ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು ಸ್ವರ್ಣ ಪಾಶನ ಕಾರ್ಯಕ್ರಮವಿರುತ್ತದೆ ಎಂದು ಡಾಕ್ಟರ್ ಮಾಹಿತಿ ನೀಡಿದರು.