ಪೆರಾಜೆ ಪ್ರಾ.ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ( ದ್ವಿ ಭಾಷಾ) ಉದ್ಘಾಟನಾ ಕಾರ್ಯಕ್ರಮ

0

ಪೆರಾಜೆ ಪ್ರಾ.ಶಾಲೆಯಲ್ಲಿ ಜುಲೈ ೨೧ ಆಂಗ್ಲ ಮಾಧ್ಯಮ ಉದ್ಘಾಟನಾ ( ದ್ವಿ ಭಾಷಾ) ಕಾರ್ಯಕ್ರಮ ನೆರವೇರಿತು.


ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಯ ಅಧ್ಯಕ್ಷ ವಿನಯ್ ಕುಮಾರ್ ನೆಡ್ಚಿಲ್ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಸರಕಾರದ ಈ ದ್ವಿಭಾಷಾ ಕಾರ್ಯಕ್ರಮದಿಂದ ಎಲ್ಲರಿಗೂ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಲು ಒಂದು ಉತ್ತಮ ಅವಕಾಶ ಸಿಕ್ಕಂತಾಗಿದೆ. ಎಲ್ಲಾ ಪೋಷಕರು ಮುಂದಿನ ದಿನಗಳಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.


ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ವಾರ್ಡ್ ಸದಸ್ಯರಾದ ಉದಯ್ ಕುಮಾರ್ ಕುಂಬಳಚೇರಿ, ಪ್ರವೀಣ್ ಮಜಿಕೋಡಿ, ಶ್ರೀಮತಿ ಪೂರ್ಣಿಮಾ ಉದಯ್ ಕುಮಾರ್ ಕುಂಡಾಡು ಹಾಗೂ ಸದಸ್ಯರಾದ ಶ್ರೀಮತಿ ಜಯಲಕ್ಷ್ಮಿ ಧರಣಿದರ, ಸಮೂಹ ಸಂಪನ್ಮೂಲ ವ್ಯಕ್ತಿ , ಪೆರಾಜೆ ಕ್ಲಸ್ಟರ್ ಚಂದ್ರಶೇಖರ್ ಜ.ವಿ. ಎಸ್ ಡಿ ಎಂ ಸಿ ಯ ಉಪಾಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಬಂಗಾರಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಯ ಎಲ್ಲಾ ಪದಾಧಿಕಾರಿಗಳು ಪೋಷಕ ವೃಂದ ಹಾಗೂ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಎಚ್. ಆರ್. ರಾಜು ಅವರು ಸ್ವಾಗತಿಸಿದರು, ಲೋಕೇಶ್ ಎನ್ ,ಇಂಗ್ಲೀಷ್ ಶಿಕ್ಷಕರು ವಂದಿಸಿದರು ಮತ್ತು ಗಣಿತ ಶಿಕ್ಷಕರಾದ ಕೃಷ್ಣರವರು ಕಾರ್ಯಕ್ರಮ ನಿರೂಪಿಸಿದರು.