














ಯೋಗಾಸನದಲ್ಲಿ 07 ಕ್ಲಿಷ್ಟಕರ ಆಸನಗಳನ್ನು, ಒಂದೊಂದು ಆಸನವನ್ನು 03 ನಿಮಿಷ ಒಂದೇ ಸ್ಥಿತಿಯಲ್ಲಿ 21 ನಿಮಿಷ ನಿರಂತರ ಆಸನಗಳನ್ನು ಮಾಡುವ ಮೂಲಕ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಏನೇಕಲ್ಲು ಗ್ರಾಮದ ಅಕ್ಷಯ ಬಾಬ್ಲುಬೆಟ್ಟು ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಇವರು ಏನೇಕಲ್ಲು ನಿವಾಸಿ, ಸುದ್ದಿ ಏಜೆಂಟ್ ಮೋಹನ್ ಕುಮಾರ್ ಮತ್ತು ಶ್ರೀಮತಿ ದಿವ್ಯ ಕುಮಾರಿ ದಂಪತಿಯ ಪುತ್ರಿ. ಏನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ನಿರಂತರ ಯೋಗ ಕೇಂದ್ರ ಏನೇಕಲ್ಲು ಇಲ್ಲಿಯ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.










