ಪುತ್ತೂರು ಕಂಪನಿಯೋ ನೆಮ್ಮದಿ ವೇಲ್ ನೆಸ್ ಸೆಂಟರ್ ವತಿಯಿಂದ ಅಲೆಟ್ಟಿ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ 15 ದಿನಗಳ ಕಾಲ ನಡೆಯಲಿರುವ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಉದ್ಘಾಟನೆಯು ಜು. 23 ರಂದು ನಡೆಯಿತು.

ಅಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಅಲೆಟ್ಟಿ ಯವರು ದೀಪ ಪ್ರಜ್ವಲಿಸಿದರು.








ಕಂಪನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಮಾಲಕ ಪ್ರಭಾಕರ್ ಸಾಲ್ಯಾನ್ ರವರು 15 ದಿನಗಳ ಕಾಲ ನಡೆಯುವ ಶಿಬಿರದ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ,ಪಂಚಾಯತ್ ಉಪಾಧ್ಯಕ್ಷೆ ಕಮಲ ನಾಗಪಟ್ಟಣ,ನಿವೃತ್ತ ಯೋಧ ರಾಧಾಕೃಷ್ಣ ರೈ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೃಜನ್ ಎ. ಜಿ, ಗುಂಡ್ಯ ಜನನಿ ಫ್ರೆಂಡ್ ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ಅಲೆಟ್ಟಿ ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿ ಸೀತಾರಾಮ ಮೊರಂಗಲ್ಲು ಸ್ವಾಗತಿಸಿ, ಶಿವಪ್ರಸಾದ್ ಅಲೆಟ್ಟಿ ವಂದಿಸಿದರು.
ವೆಲ್ ನೆಸ್
ಸೆಂಟರ್ ನ ಸಿಬ್ಬಂದಿಗಳಾದ ಪ್ರಮೀಳಾ, ಸುಷ್ಮಾ, ಅಭೀಜ್ಞಾ ಸಹಕರಿಸಿದರು.
ಶಿಬಿರದಲ್ಲಿ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.










