ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ಇದರ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕ ಮರ್ಕಂಜದಲ್ಲಿ ನಡೆಯಿತು.








ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಧನಂಜಯ ರವರು ಗಿಡ ನೆಡುವ ಮೂಲಕ ಉದ್ಘಾಟನೆ ಮಾಡಿದರು.

ವಲಯ ಮೇಲ್ವಿಚಾರಕರಾದ ಹರೀಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಸರದ ಬಗ್ಗೆ ಕೃಷಿ ಮೇಲ್ವಿಚಾರರಕರಾದ ರಮೇಶ್ ರವರು ಮಕ್ಕಳಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು ಲೀಲಾವತಿ ಸೂಟೆಗದ್ದೆ, ಗ್ರಾಮ ಪಂಚಾಯತ್ ಅಧ್ಯಕ್ಷರು ಗೀತಾ ಹೊಸೋಳಿಕೆ , ಒಕ್ಕೂಟದ ಪದಾಧಿಕಾರಿಗಳು ಶಾಲಾ ಮುಖ್ಯ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿಯಾದ ಪ್ರತಿಮರವರು ಕಾಯ೯ ಕ್ರಮ ನಿರೂಪಣೆ ಮಾಡಿ. ಮರ್ಕಂಜ ಗ್ರಾಮದ ಸೇವಾ ಪ್ರತಿನಿಧಿಯಾದ ರೋಹಿಣಿಯವರು ಅಂಗಡಿಮಜಲು ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿಯಾದ ಪಲ್ಲವಿ ವಂದಿಸಿದರು.










