ದೇವಚಳ್ಳ ಗ್ರಾಮ ಪಂಚಾಯತ್ ಗುಮಾಸ್ತರಾಗಿದ್ದ ಶಿವರಾಮ ಕುಚ್ಚಾಳ ರವರಿಗೆ ಬೀಳ್ಕೊಡುಗೆ ಸಮಾರಂಭ

0

ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ಕಳೆದ 31 ವರ್ಷಗಳಿಂದ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವರಾಮ ಕುಚ್ಚಾಳ ರವರಿಗೆ ಬೀಳ್ಕೊಡುಗೆ ಸಮಾರಂಭವು ಇಂದು ದೇವಚಳ್ಳ ಗ್ರಾಮ ಪಂಚಾಯತ್ ಸಭಾಭಾವನದಲ್ಲಿ ನಡೆಯಿತು.

ಶಿವರಾಮರವರನ್ನು ಅಭಿನಂದಿಸಿ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಜಿ.ಪಂ ಸದಸ್ಯರಾದ ಭರತ್ ಮುಂಡೋಡಿಯವರು “ಯಾರಿಗೂ ನೋವು ನೀಡದೆ, ನಿಷ್ಠೆಯಿಂದ ಕೆಲಸ ಮಾಡುವುದರೊಂದಿಗೆ 30 ವರ್ಷದಲ್ಲಿ ಯಾವುದೇ ದೂರು ಬಾರದಂತೆ ಕರ್ತವ್ಯ ಮಾಡಿದ್ದಾರೆ. ಸಮಯದ ಹೊಂದಾಣಿಕೆ, ಕರ್ತವ್ಯ ನಿಷ್ಠೆ ಇತರ ಎಲ್ಲಾ ಸಿಬ್ಬಂದಿಗಳಿಗೆ ಮಾದರಿಯಾಗಿತ್ತು” ಎಂದರು.

ವೇದಿಕೆಯಲ್ಲಿ ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಭಾರತ್ ಮುಂಡೋಡಿ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಪಾರೆಪ್ಪಾಡಿ, ಮಹಮ್ಮದ್ ಇಕ್ಬಾಲ್, ಸುಲೋಚನಾ ದೇವ,
ದಿವಾಕರ ಮುಂಡೋಡಿ,
ಕೃಷ್ಣಪ್ಪ ಕುಚ್ಚಳ, ತಾ. ಪಂ. ಮಾಜಿ ಸದಸ್ಯೆ ಯಶೋದಾ ಬಾಳೆಗುಡ್ಡೆ, ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಪಿ ಡಿ ಓ ಗುರುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ 31 ವರ್ಷಗಳಿಂದ ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ಗುಮಾಸ್ತನಾಗಿ ಕರ್ತವ್ಯ ಸಲ್ಲಿಸಿದ್ದ ಶಿವರಾಮ ಕುಚ್ಚಾಳ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಿಬ್ಬಂದಿಗಳ ಪರವಾಗಿ ವಿಜಯಕಾಂತ್ ಮಾತನಾಡಿದರು. ರಮೇಶ್ ಪಡಪು ಸ್ವಾಗಿತಿಸಿದರು. ಶೈಲೇಶ್ ವಂದಿಸಿದರು. ಪ್ರಪುಲ್ಲ ಕಾರ್ಯಕ್ರಮ ನಿರೂಪಿಸಿದರು.