ಲಾರಿ – ಕಾರು ಪರಸ್ಪರ ಡಿಕ್ಕಿ: ಕಾರು ಜಖಂ, ಪ್ರಯಾಣಿಕರು ಪಾರು
ಇಂದು ಕೆಲವೇ ಗಂಟೆಗಳ ಮೊದಲು ಕೊಯಿನಾಡು ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಯುವಕರನ್ನು ನೋಡಲು ಬಂದಿದ್ದ ಕುಟುಂಬದ ಸದಸ್ಯರ ಕಾರಿಗೆ ಲಾರಿ ಡಿಕ್ಕಿ ಹೊಡೆದು ಕಾರಿನ ಮುಂಭಾಗ ಜಖಂ ಗೊಂಡು ಪ್ರಯಾಣಿಕರು ಅದೃಷ್ಟವಶಾತ್ ಪಾರಾದ ಘಟನೆ ಇದೀಗ ನಡೆದಿದೆ.















ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಮೃತದೇಹಗಳ ಪೋಸ್ಟ್ ಮಾರ್ಟಂ ಆಗದೇ ಇದ್ದ ಕಾರಣ ಅದನ್ನು ಮಡಿಕೇರಿ ಆಸ್ಪತ್ರೆಗೆ ಕೊಡೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್ ವಾಹನದ ಹಿಂದೆ ಹೋಗುತ್ತಿದ್ದ ಕಾರಿಗೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ.










