ಕೊಲ್ಲಮೊಗ್ರು ಹರಿಹರ ಸೊಸೈಟಿಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿಯವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪ್ರಭಾಕರ ಕಿರಿಭಾಗ

ಕಠಿಣ ಸಾವಾಲುಗಳನ್ನು ಎದುರಿಸಿ ಬೆಳೆದವರು, ಸಂಸ್ಥೆಯನ್ನು ಬೆಳೆಸಿದವರು ಅನಂತರಾಮ ಮಣಿಯಾನ ಮನೆ. ಉದ್ಯೋಗ ಆರಂಭದ ದಿನಗಳಲ್ಲಿ ಸೊಸೈಟಿಯ ಸೈಕಲ್ ನಲ್ಲಿ ಹರಿಹರದಿಂದ ಬಾಳುಗೋಡಿಗೆ ಸೈಕಲ್ ನಲ್ಲಿ ಹೋಗಿ ಬಂದು ಕರ್ತವ್ಯ ಮಾಡಿದವರು, ಪೆನ್ ಗೆ ರಿಫಿಲ್ ಕೊಟ್ಟು ಉಪಯೋಗಿಸಿ ಮುಗಿಸಿದ ನಂತರ ದಾಖಲೆಗೆ ಕೊಡುವ ದಿನಗಳಿದ್ದ ಅಂತಹ ಸಂದರ್ಭದಲ್ಲಿ ಸಂಸ್ಥೆಯನ್ನು ಬೆಳೆಸಿ ತಾನೂ ಬೆಳೆದು ಸಂಸ್ಥೆಯನ್ನು ಬೆಳೆಸಿದರು ಎಂದು
ನಿವೃತ್ತ ಪ್ರಾಂಶುಪಾಲ ಪ್ರಭಾಕರ ಕಿರಿಬಾಗ ಅವರು ನುಡಿದರು.

ಅವರು ಕೊಲ್ಲಮೊಗ್ರು ಹರಿಹರ ಪ್ರಾ.ಕೃ ಪ. ಸ. ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ
ಅವರಿಗೆ ಬೀಳ್ಕೊಡುಗೆ ಮತ್ತು ನಿವೃತ್ತ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಅಭಿನಂದನಾ ಭಾಷಣ ಮಾಡುತ್ತಿದ್ದರು.

ಅನಂತರಾಮ ಅವರು
ಸಮಯ ಸಂದರ್ಭಕ್ಕೆ ತಕ್ಕಂತೆ ನಿರ್ವಹಣೆ ಮಾಡುವ ಕಲೆ ಅವರಿಗಿತ್ತು, ಅದು ಮಹಾಸಭೆಯಲ್ಲಿ ಅವರು ಉತ್ತರಿಸುವುದನ್ನು ನೋಡಿದರೆ ಗೊತ್ತಾಗುತಿತ್ತು. ದುರ್ಬಲ, ಬಡವ, ಬಲ್ಲಿದರನ್ನು ಎಲ್ಲರನ್ನೂ ಒಂದೇ ರೀತಿ ಕಂಡವರು ಅವರು. ಇಲ್ಲಿನ ಎಲ್ಲಾ ನಿವೃತ್ತರು, ಹಾಲಿ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುವವರೇ ಎಂದರು.

ಕಾರ್ಯಕ್ರಮವು ಜು. 26 ರಂದು ಹರಿಹರೇಶ್ವರ ಕಲಾಮಂದಿರದಲ್ಲಿ ನೆರವೇರಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಾl ಸೋಮಶೇಖರ ಕಟ್ಟೆಮನೆ ವಹಿಸಿದ್ದರು. ಸನ್ಮಾನ ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಕುಂಞೇಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಹಿರಿಯ ವೈದ್ಯರಾದ ಡಾ.ಚಂದ್ರಶೇಖರ ಕಿರಿಭಾಗ ಅವರು ನಿವೃತ್ತರನ್ನು ಸನ್ಮಾನಿಸಿದರು.















ವೇದಿಕೆಯಲ್ಲಿ ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನ ಕಟ್ಟ ಇದರ ಮಾಜಿ ಆಡಳಿತ ಮೊಕ್ತೇಸರ ಕೆ.ಜಿ. ಶಂಭಯ್ಯ ಪನ್ನೆ, ಕೊಲ್ಲಮೊಗ್ರು ಹರಿಹರ ಪ್ರಧಾನ ಕಚೇರಿಗೆ ಸ್ಥಳದಾನ ಮಾಡಿದ ಶ್ರೀಮತಿ ಭವಾನಿ ಶಿವರಾಮ ಗೌಡ ಮುಂಡಾಜೆ, ಸೊಸೈಟಿಯ ನಿಕಟ ಪೂರ್ವ ಅಧ್ಯಕ್ಷ ಹರ್ಷಕುಮಾರ್ ದೇವಜನ, ಹರಿಹರ ಪಲ್ಲತಡ್ಕದ ವೈದ್ಯರಾದ ಡಾ. ಗಿರೀಶ್ ಕೆ.ಜಿ, ಉರಿಮಜಲು, ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷ ವಿಜಯಕುಮಾರ್ ಅಂಙಣ, ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮೋಹಿನಿ ಕಟ್ಟ, ನಿವೃತ್ತ ಮುಖ್ಯೋಪಾಧ್ಯಾಯರಾದ ರಾಮಚಂದ್ರ ಗೌಡ ಕಜ್ಜೋಡಿ, ಸೊಸೈಟಿಯ ಮಾಜಿ ಅಧ್ಯಕ್ಷ ವಿನೂಪ್ ಮಲ್ಲಾರ, ಹರಿಹರ ಪಲ್ಲತಡ್ಕ ಗ್ರಾ.ಪಂ ನ ಮಾಜಿ ಅಧ್ಯಕ್ಷ ಚಂದ್ರಹಾಸ ಶಿವಾಲ, ಕೆ.ವಿ.ಜಿ ಪವರ್ ಹೌಸ್ ನ ಕಾರ್ಯನಿರ್ವಾಹಣಾಧಿಕಾರಿ ವಸಂತ ಕಿರಿಭಾಗ, ನಿವೃತ್ತ ಸಬ್ ಇನ್ಸ್ ಪೆಕ್ಟರ್ ಸುಬ್ಬಣ್ಣ ಗೌಡ ಮಣಿಯಾನ ಮನೆ, ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಸೊಸೈಟಿಯ ಹಾಲಿ ಉಪಾಧ್ಯಕ್ಷ ಗಣೇಶ್ ಭಟ್ ಇಡ್ಯಡ್ಕ, ಮುಖ್ಯ ಲಕಾರ್ಯನಿರ್ವಾಹಣಾಧಿಕಾರಿ ಬೆಳ್ಯಪ್ಪ ಗೌಡ ಮಣಿಯಾನ ಮನೆ, ಉಪಸ್ಥಿತರಿದ್ದರು.
ನಿರ್ದೇಶಕರಾದ ಡ್ಯಾನಿ ಯಲದಾಳು, ರೇಗನ್ ಎಸ್.ಪಿ, ಶೇಷಪ್ಪ ಗೌಡ ಕಿರಿಭಾಗ, ಹಿಮ್ಮತ್ ಕಿರಿಭಾಗ, ಕಮಲಾಕ್ಷ ಮುಳ್ಳುಬಾಗಿಲು, ಶ್ರೀಮತಿ ವೇದಾವತಿ ಮುಳ್ಳುಬಾಗಿಲು, ಶ್ರೀಮತಿ ಮೇನಕಾ ಕೊಪ್ಪಡ್ಕ, ಗೋಪಾಲಕೃಷ್ಣ ಚಾಂತಾಳ, ಮಹಾಲಿಂಗ ನಾಯ್ಕ, ಬೊಳಿಯ ಬೆಂಡೋಡಿ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ ಸಭೆಯಲ್ಲಿ ಅನಂತರಾಮ ಮಣಿಯಾನ ಮನೆ ಮತ್ತು ಶ್ರೀಮತಿ ಉಷಾ ದಂಪತಿಗಳನ್ನು, ನಿವೃತ್ತ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಬಟ್ಟೋಡಿ ಮತ್ತು ಶ್ರೀಮತಿ ಕಿರಣ ಬಿ.ಸಿ ದಂಪತಿಗಳನ್ನು, ರವೀಂದ್ರ ಮುಚ್ಚಾರ ಮತ್ತು ಶ್ರೀಮತಿ ಅನಸೂಯ ದಂಪತಿಗಳನ್ನು , ನಿವೃತ್ತ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ದಿl ಹೂವಪ್ಪ ಗೌಡ ಕಂಚುಗಾರ ಗದ್ದೆ ಅವರ ಪತ್ನಿ ಪುಷ್ಪಾವತಿ ಹೂವಪ್ಪ ಕಂಚುಗಾರಗದ್ದೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿಬ್ಬಂದಿಗಳಾದ
ತೀರ್ಥಕುಮಾರಿ ಮತ್ತು ಗೌರೀಶ್ ಮಲ್ಲಾಜೆ ಅನಿಸಿಕೆ ವ್ಯಕ್ತಪಡಿಸಿದರು.
ದಿವ್ಯ ಮತ್ತು ಅಪೂರ್ವ ಪ್ರಾರ್ಥನೆ ಮಾಡಿದರು, ನಿರ್ದೇಶಕ ಹಿಮ್ಮತ್ ಕೆ.ಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಮಲಾಕ್ಷ ಮುಳ್ಳುಬಾಗಿಲು ವಂದಿಸಿದರು. ಸೊಸೈಟಿ ಸಿಬ್ಬಂದಿ ಪುಷ್ಪಲತಾ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.
ಪೋಟೋ: ಉಲ್ಲಾಸ್ ಮುಚ್ಚಾರ










