ಅಧ್ಯಕ್ಷ ಕಿರಣ್ ಕಲ್ಲೆಂಬಿ, ಕಾರ್ಯದರ್ಶಿ ಗುರುಪ್ರಕಾಶ್ ಕುಂಚಡ್ಕ, ಖಜಾಂಚಿ ಜವಾಹರ್ ಕೊಯಿಂಗಾಜೆ
ಬಾರ್ಪಣೆ ವಿಕ್ರಮ ಯುವಕ ಮಂಡಲ ಇದರ ವಾರ್ಷಿಕ ಮಹಾಸಭೆಯುಯುವಕಮಂಡಲದ ಅಧ್ಯಕ್ಷವಿನಯ್ ಕುಮಾರ್ ರೈ ಯವರ ಅಧ್ಯಕ್ಷತೆಯಲ್ಲಿ ಜು.20 ರಂದು ಯುವಕ ಮಂಡಲದ ಕಟ್ಟಡದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಾರ್ಷಿಕ ವರದಿ ವಾಚಿಸಿದರು. ಬಳಿಕ ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.









ನೂತನ ಅಧ್ಯಕ್ಷರಾಗಿ
ಕಿರಣ್ ಕಲ್ಲಂಬಿ, ಕಾರ್ಯದರ್ಶಿ ಗುರುಪ್ರಕಾಶ್ ಕುಂಚಡ್ಕ, ಖಜಾಂಚಿ ಜವಾಹರ್ ಕೊಯಿಂಗಾಜೆ, ಉಪಾಧ್ಯಕ್ಷ ಅಶ್ವಿನ್ ಅಡ್ಪಂಗಾಯ, ಜತೆ ಕಾರ್ಯದರ್ಶಿ ವಿಜೇಶ್ ಕೋಲ್ಚಾರು, ಕ್ರೀಡಾ ಕಾರ್ಯದರ್ಶಿ ಸಚಿನ್ ನಾರ್ಕೋಡು, ಶ್ರಮದಾನ ಪ್ರಮುಖ್ ಉಜ್ವಲ್ ಕೊನ್ನೋಡಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರಾದ ಆಲೆಟ್ಟಿ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಪಂಚಾಯತ್ ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ, ಬಾಲಕೃಷ್ಣ ಗೌಡ ಕುಂಚಡ್ಕ, ಪುರುಷೋತ್ತಮ ನಡುಮನೆ ಸೋಮನಾಥ ನಡುಮನೆ ಪ್ರಶಾಂತ್ ಕೋಲ್ಚಾರು ವಸಂತ ಬಾಳೆಹಿತ್ಲು, ಹೂವಾನಂದ ಪಾತಿಕಲ್ಲು, ಬಾಲಚಂದ್ರ ಏಣಾವರ, ದೀಪಕ್ ಕುಂಚಡ್ಕ, ಕೌಶಿಕ್ ಅಡ್ಪಂಗಾಯ, ಅಖಿಲ್ ನಾರ್ಕೋಡು ಉಪಸ್ಥಿತರಿದ್ದರು.
ವಿಜೇಶ್ ಕೋಲ್ಚಾರು ಸ್ವಾಗತಿಸಿ, ಕಿಶೋರ್ ನಡುಮನೆ ವಂದಿಸಿದರು.










