ಮರ್ಕಂಜದ ರೆಂಜಾಳ ಕ್ಷೇತ್ರಕ್ಕೆ ಹೋಗುವ ರಸ್ತೆಯ ಮಧ್ಯೆ 2 ಕಡೆಗಳಲ್ಲಿ ಮರದ ಕೊಂಬೆಗಳು ವಿದ್ಯುತ್ ಲೈನ್ ಗೆ ತಾಗಿಕೊಂಡಿದ್ದ ಪರಿಣಾಮವಾಗಿ ವಿದ್ಯುತ್ ಅಡಚಣೆ ಉಂಟಾಗುತ್ತಿತ್ತು. ಹೀಗಾಗಿ ಮೆಸ್ಕಾಂ ಸಿಬ್ಬಂದಿಯ ಸಹಕಾರದೊಂದಿಗೆ ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಇದರ ಸದಸ್ಯರು ವಿದ್ಯುತ್ ಲೈನ್ ಗೆ ತಗುಲಿದ ಮರಗಳನ್ನು ಇಂದು ಜೆ ಸಿ ಬಿ ಬಳಸಿ ತೆರವುಗೊಳಿಸಿದರು.









ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ ಹಾಗೂ ಸದಸ್ಯರಾದ ಮಹೇಶ್ ಹೈದಂಗೂರು, ಮೋಹನ್ ರೆಂಜಾಳ, ಸಂಜಿತ್ ಹೈದಂಗೂರು, ಸುಜಿತ್ ರೆಂಜಾಳ, ಸುಧೀಶ್ ರೆಂಜಾಳ, ಗಿರೀಶ್ ಕೊಡಪಾಲ, ರೋಹಿತ್ ಕೊಡಪಾಲ ಹಾಗೂ ಜಯಪ್ರಕಾಶ್ ಬೇರಿಕೆ ಪಾಲ್ಗೊಂಡಿದ್ದರು.











