ಮಣಿಕ್ಕಾರ ಸ.ಪ್ರೌ.ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ನಳಿನಿ ನಿವೃತ್ತಿ

0

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಮಣಿಕ್ಕಾರ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ನಳಿನಿ ಪುರುಷೋತ್ತಮ ಕಿರ್ಲಾಯರು ಜು.೩೧ರಂದು ಸೇವೆಯಿಂದ ನಿವೃತ್ತಿ ಹೊಂದಿದರು.

ಐವರ್ನಾಡು ಗ್ರಾಮದ ಕುಳ್ಳಂಪಾಡಿ ಮನೆ ವೆಂಕಪ್ಪ ಗೌಡ ಮತ್ತು ಚಂದ್ರಮ್ಮ ದಂಪತಿಯ ಪುತ್ರಿ.
ವಿಧ್ಯಾಭ್ಯಾಸದ ಬಳಿಕ ೧೯೮೮ ಆಗಸ್ಟ್ ರಿಂದ ೧೯೯೬ ಮಾರ್ಚ್ ವರೆಗೆ ಜ್ಯೋತಿ ಪ್ರೌಢಶಾಲೆ ಪೆರಾಜೆ ವಿಜ್ಞಾನ ಶಿಕ್ಷಕಿ ಸೇವೆ ಸಲ್ಲಿಸಿದರು. ೧೯೯೬ರಿಂದ ೨೦೧೯ ನವೆಂಬರ್ ವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಗಾಂಧಿನಗರ ಕೆ ಪಿಎಸ್ ಇಲ್ಲಿ ವಿಜ್ಞಾನ ಶಿಕ್ಷಕಿ ಹಾಗೂ ಪ್ರಭಾರ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಇವರು, ೨೦೧೯ರಲ್ಲಿ ಸರಕಾರಿ ಪ್ರೌಢಶಾಲೆ ಗೋಳ್ತಮಜಲು ಬಂಟ್ವಾಳ ಇಲ್ಲಿಗೆ ವರ್ಗಾವಣೆಗೊಂಡರು. ೨೦೨೦ ರಲ್ಲಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಗೆ ಶಿಕ್ಷಣ ಸಂಯೋಜಕರಾಗಿ ಬಂದ ಇವರು ೨೦೨೩ ಡಿಸೆಂಬರ್ ವರೆಗೆ ಕಾರ್ಯನಿರ್ವಹಿಸಿ, ೨೦೨೪ ಮೇ ತಿಂಗಳಲ್ಲಿ ಮುಖ್ಯ ಶಿಕ್ಷಕ ರಾಗಿ ಪದೋನ್ನತಿ ಹೊಂದಿ ಕೊಳ್ತಿಗೆ ಮಣಿಕ್ಕರ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡರು. ಸುದೀರ್ಘ ೩೭ ವರ್ಷಗಳ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಹಾಗೂ ಸಂಸ್ಥೆಗಳ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದಾರೆ. ಪಾಠ ಹಾಗೂ ಪಠ್ಯೇತರ ಚಟುವಟಿಕೆ, ವೈಜ್ಝಾನಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ತಯಾರಿ, ನವೋದಯ, ಎನ್.ಎಂ.ಎಂ.ಎಸ್, ಎನ್‌ಟಿಎಸ್.ಇ. ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ತರಬೇತಿಗಳಲ್ಲೂ ತೊಡಗಿಸಿಕೊಂಡು ಕ್ರಿಯಾಶೀಲರಾಗಿರುತ್ತಾರೆ.
ಶ್ರೀಮತಿ ನಳಿನಿಯವರು ಸುಳ್ಯ ನಾವೂರು – ಕಾಯರ್ತೋಡಿ ನಿವಾಸಿ, ಪೆರಾಜೆ ಜ್ಯೋತಿ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಪುರುಷೋತ್ತಮ ಕಿರ್ಲಾಯರ ಪತ್ನಿ. ಮಗ ಯಶಸ್ ಕಿರ್ಲಾಯ ಎಂ.ಬಿ.ಎ. ಪದವೀಧರ. ಮಗಳು ಶಕಿಲಾ ಸಾಪ್ಟ್ವೇರ್ ಉದ್ಯೋಗಿಯಾಗಿದ್ದು ಪತಿ ಸಚಿನ್‌ರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.