ಮುರುಳ್ಯ: ವಿವಿಧ ಸಂಘಗಳ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

0

ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ- ಗ್ರಾಮೋತ್ಸವ 2025ರ ಅಂಗವಾಗಿ ಒಡಿಯೂರು ಗ್ರಾಮ ವಿಕಾಸ ಯೋಜನೆ ಮುರುಳ್ಯ ವಲಯ ಮುರುಳ್ಯ ಘಟ ಸಮಿತಿ, ಗುರುದೇವಾ ಸೇವಾಬಳಗ ಮುರುಳ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಾಗಶ್ರೀ ಸಂಜೀವಿನಿ ಒಕ್ಕೂಟ ಮುರುಳ್ಯ , ಶ್ರೀ ರಾಮ ಫ್ರೆಂಡ್ಸ್‌ ಮುರುಳ್ಯ, ಗ್ರಾಮ ಪಂಚಾಯತ್ ಮುರುಳ್ಯ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಸ್ವಚ್ಚತಾ ಕಾರ್ಯಕ್ರಮ ಮುರುಳ್ಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ನಡೆಯಿತು.

ಏಕಕಾಲದಲ್ಲಿ 365 ಕಡೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಕು. ಭಾಗಿರಥಿ ಮುರುಳ್ಯ, ಮುರುಳ್ಯ ಗ್ರಾ‌. ಪಂ. ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಬಾಮೂಲೆ, ಉಪಾಧ್ಯಕ್ಷೆ ಕು. ಜಾನಕಿ ಶಾಂತಿನಗರ, ಸದಸ್ಯರಾದ ಮೋನಪ್ಪ ಗೌಡ ಅಲೇಕಿ, ಶ್ರೀ ರಾಮಾಂಜನೇಯ ಭಜನಾ ಮಂದಿರದ ಸಂಚಾಲಕರಾದ ವಸಂತ ನಡುಬೈಲು, ಸೇವಾಬಳಗ ಕಾರ್ಯದರ್ಶಿ ಸುನೀಲ್ ರೈ ಬಲ್ಕಾಡಿ, ಶ್ರೀ ರಾಮ ಪ್ರೇಂಡ್ಸ್ ಮುರುಳ್ಯ ಇದರ ಅಧ್ಯಕ್ಷ ರೋಹಿತ್ ಹೆದ್ದಾರಿ, ನಾಗಶ್ರೀ ಸಂಜೀವಿನಿ ಒಕ್ಕೂಟದ ಶೈಲಜಾ, ಸವಿತಾ ನಡುಬೈಲು ಮತ್ತು ಮುರುಳ್ಯ ಘಟ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂದೆ, ಉಪಾಧ್ಯಕ್ಷೆ ವೀಣಾ ಮರುವಂಜ, ಜೊತೆಕಾರ್ಯದರ್ಶಿ ಯತೀಶ್ ನಾಗನಕಜೆ, ಸೇವಾದೀಕ್ಷಿತೆ ಪ್ರೇಮಾವತಿ, ಯೋಜನೆಯ ಬೆಳ್ಳಾರೆ ಮುರುಳ್ಯ ಲೆಕ್ಕಪರಿಶೋಧಕರಾದ ಶ್ರೀಮತಿ ಚೈತನ್ಯ ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.