ಸುಳ್ಯ ನಗರ ಪಂಚಾಯತ್ ಘನತ್ಯಾಜ್ಯ ಘಟಕಕ್ಕೆ ಸುಳ್ಯದ ದುಗಲಡ್ಕದಲ್ಲಿ 3 ಎಕ್ರೆ ಜಾಗ ಕಾದಿರಿಸಲು ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸೂಚನೆ ನೀಡಲಾಗಿದೆ.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಸುಳ್ಯ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಯಾಗಿರುವ ಸಂತೋಷ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.















ತಹಶೀಲ್ದಾರ್ ಮಂಜುಳಾ, ಇ.ಒ. ರಾಜಣ್ಣ ಹಾಗೂ ತಾಲೂಕಿನ ಇಲಾಖಾ ಅಧಿಕಾರಿಗಳು ಇದ್ದರು.
ಪಾಲನಾ ವರದಿಯಲ್ಲಿ ಸುಳ್ಯ ನಗರದ ಘನತ್ಯಾಜ್ಯ ಘಟಕಕ್ಕೆ ದುಗಲಡ್ಕದಲ್ಲಿ ಜಾಗ ಕಾದಿರಿಸಿದ ಕುರಿತು ಪ್ರಸ್ತಾಪವಾಯಿತು. ಈ ವೇಳೆ ಮಾತನಾಡಿದ ನಗರ ಪಂಚಾಯತ್ ಅಧಿಕಾರಿ ನಗರದ ಘನತ್ಯಾಜ್ಯ ಘಟಕಕ್ಕೆ ಬೇರೆ ಎಲ್ಲೂ ಜಾಗ ಇಲ್ಲ. ಅದು ಅವಶ್ಯಕವಾಗಿ ಬೇಕು ಎಂದು ಹೇಳಿದರು.
ವಲಯಾರಣ್ಯಾಧಿಕಾರಿ ಮಂಜುನಾಥರು ಅರಣ್ಯಕ್ಕೆ ಸಂಬಂಧಿಸಿದ ಜಾಗ ಹೊರತು ಪಡಿಸಿ ಇರುವ 3 ಎಕ್ರೆ ಜಾಗ ದ ವಿವರ ನೀಡಿದರು. ಆ ಜಾಗ ಕೆಎಫ್ ಡಿಸಿ ಸ್ವಾದೀನ ಇದೆ ಎಂದು ಮಾಹಿತಿ ನೀಡಿದಾಗ, ಆರ್.ಟಿ.ಸಿ. ಯಲ್ಲಿ ಏನಿದೆ ಎಂದು ಆಡಳಿತಾಧಿಕಾರಿ ಪ್ರಶ್ನಿಸಿದರು. “ಸರಕಾರಿ” ಎಂದು ನಮೂದಿದೆ ಎಂದು ತಹಶೀಲ್ದಾರ್ ಉತ್ತರಿಸಿದಾಗ, ಇನ್ನು ತಡ ಮಾಡುವುದು ಬೇಡ.ಅದನ್ನು ನಿಮ್ಮ ಸುಪರ್ದಿಗೆ ಪಡೆದುಕೊಳ್ಳಿ. ಘನತ್ಯಾಜ್ಯ ಘಟಕಕ್ಕೆ ಯೋಗ್ಯವೇ ಎಂದು ಸಂಬಂಧಿಸಿದ ಇಲಾಖೆಯಿಂದ ಎನ್.ಒ.ಸಿ. ಪಡೆದು ಮುಂದುವರಿಯಿರಿ ಎಂದು ಹೇಳಿದರು.










