ಕಾರ್ಮಿಕ ಮುಖಂಡ ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಐವರ್ನಾಡು ಗ್ರಾಮದ ಬೇಂಗಮಲೆ ಚಂದ್ರಲಿಂಗಂ ರವರು ಇತ್ತೀಚೆಗೆ ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆ ಆ.10 ರಂದು ಸುಳ್ಯದ ಅಂಬಟೆಡ್ಕ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.
















ಚಂದ್ರಲಿಂಗಂ ರವರ ಪತ್ನಿ ಶ್ರೀಮತಿ ಚಂದ್ರಕಾಂತಿಯವರು ದೀಪ ಬೆಳಗಿಸಿದರು.
ಆಗಮಿಸಿದ ನೂರಾರು ಜನ ಗಣ್ಯರು ದಿ.ಚಂದ್ರಲಿಂಗಂ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುತ್ರರಾದ ಚರಣ್ ಪ್ರಸಾದ್, ಅನಿಲ್ ಕುಮಾರ್ ಪುತ್ರಿಯರಾದ ಶ್ರೀಮತಿ ಚರಣ್ಯ ಪ್ರಭುರಾಮನ್, ಶ್ರೀಮತಿ ಚಾರ್ಮಿಳಾ ಜಯಕುಮಾರ್ ,ಸೊಸೆ ,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.










