ಶೇಣಿ ಶಾಲಾ ವಿದ್ಯಾರ್ಥಿಗಳಿಗೆ ಕೋಟೆ ಫೌಂಡೇಶನ್ ವತಿಯಿಂದ ಬ್ಯಾಗ್ ವಿತರಣೆ

0

ಸ. ಹಿ. ಪ್ರಾ ಶಾಲೆ ಶೇಣಿಯ ಎಲ್ಲಾ ವಿದ್ಯಾರ್ಥಿಗಳಿಗೆ ಕೋಟೆ ಫೌಂಡೇಶನ್ ವತಿಯಿಂದ ಬ್ಯಾಗ್ ವಿತರಣೆ ಕಾರ್ಯಕ್ರಮ ಜು.26 ರಂದು ನಡೆಯಿತು. ಕೋಟೆ ಫೌಂಡೇಷನ್ ಸಂಸ್ಥಾಪಕರಾದ ರಘುರಾಮ ಕೋಟೆರವರು ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಿ, ವಿದ್ಯಾರ್ಥಿಗಳು ದೇಶದ ಸತ್ಪ್ರಜೆಗಳಾಗಿ ಊರಿಗೆ, ಶಾಲೆಗೆ ಕೀರ್ತಿ ತರಬೇಕು ಎಂದು ಶುಭಾಶಯಗಳನ್ನು ಕೋರಿದರು.


.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ ಪ್ರಶಾಂತ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗಣಪಯ್ಯ, ಅಮರ ಪಡ್ನೂರು ಗ್ರಾ. ಪಂ.ಸದಸ್ಯರಾದ ಅಶೋಕ್ ಚೂಂತಾರು, ಶಾಲೆಯ ಮಾಜಿ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಮಾಧವ ಟಿ.ಪಿ, ಅರ್ಚನಾ ಕೋಟೆ, ಕೋಟೆ ಫೌಂಡೇಶನ್ ವ್ಯವಸ್ಥಾಪಕರಾದ ವೀರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ವಿನಯಪ್ರಸಾದ್ ಟಿ.ರ ವಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಬೇಬಿರವರು ವಂದಿಸಿದರು. ಶಾಲಾ ಶಿಕ್ಷಕರಾದ ಪ್ರಭಾಕರ ಕಾರ್ಯಕ್ರಮವನ್ನು ನಿರೂಪಿಸಿದರು. ಅತಿಥಿ ಶಿಕ್ಷಕಿ ಶ್ರೀಮತಿ ಭವ್ಯ ಸಿ. ಸಹಕರಿಸಿದರು. ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ. ಯ ಸದಸ್ಯರು, ಕೋಟೆ ಫೌಂಡೇಶನ್ ನ ಉದ್ಯಮಿ ಪ್ರದೀಪ್ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.