














ಐವರ್ನಾಡು ಗ್ರಾಮದ ಕೋಡ್ತೀಲು- ಕೋಲ್ಚಾರ್ ಶ್ರೀಮತಿ ಲಕ್ಷ್ಮೀ ಯವರು
ಆ.1ರಂದು ನಿಧನರಾಗಿದ್ದು ಅವರಿಗೆ ಶ್ರದ್ದಾಂಜಲಿ ಮತ್ತು ವೈಕುಂಠ ಸಮಾರಾಧನೆ ಆ. 12ರಂದು ಕೋಲ್ಚಾರ್ ಮನೆಯಲ್ಲಿ ನಡೆಯಿತು.

ನಿವೃತ್ತ ಪ್ರಾಧ್ಯಾಪಕ ವಿಶ್ವನಾಥ ಬದಿಕಾನ ಶ್ರೀಮತಿ ಲಕ್ಷ್ಮೀ ಕೋಲ್ಚಾರ್ ರವರ ಆದರ್ಶಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನರು ಶ್ರೀಮತಿ ಲಕ್ಷ್ಮೀ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಪುರುಷೋತ್ತಮ ಕೋಲ್ಚಾರ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ
ಪುತ್ರ ರಾದ ಪದ್ಮನಾಭ ಕೋಲ್ಚಾರ್, ಜಗದೀಶ್ ಕೋಲ್ಚಾರ್, ವೆಂಕಟ್ರಮಣ ಕೋಲ್ಚಾರ್, ವೇಣುಗೋಪಾಲ ಕೋಲ್ಚಾರ್, ಪುತ್ರಿಯರಾದ ಶ್ರೀಮತಿ ಸುವಾಸಿನಿ ರಾಜಗೋಪಾಲ ಕಾಯರ್ ಮುಗೇರು, ಶ್ರೀಮತಿ ಸುಮನ ಆನಂದ ಬದಿಕಾನ, ಶ್ರೀಮತಿ ಸುಮತಿ ಲಕ್ಷ್ಮೀ ನಾರಾಯಣ ಶೇಣಿ,
ಸೊಸೆಯಂದಿರಾದ ಶ್ರೀಮತಿ ವೀಣಾ, ಶ್ರೀಮತಿ ಮಾಲತಿ, ಶ್ರೀಮತಿ ನಯನ, ಶ್ರೀಮತಿ ರಜನಿ ಮತ್ತು ಮೊಮ್ಮಕ್ಕಳು
ಹಾಗೂ ಕೋಲ್ಚಾರ್ ಕುಟುಂಬಸ್ಥರು ಉಪಸ್ಥಿತರಿದ್ದರು.










