ಗೂನಡ್ಕ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟದ ಗುಂಡಿಗೆ ಬಿದ್ದ ಕಾರು

0

ಕಾರು ಜಖಂ – ಪ್ರಯಾಣಿಕರು ಅಪಾಯದಿಂದ ಪಾರು

ಮಾಣಿ – ಮೈಸೂರು ಹೆದ್ದಾರಿಯಲ್ಲಿ ಗೂನಡ್ಕ ಸಮೀಪ ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟದ ಗುಂಡಿಗೆ ಬಿದ್ದು ಕಾರು ಸಂಪೂರ್ಣ ಜಖಂಗೊಂಡು ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಆ. 14 ರಂದು ಸಂಭವಿಸಿದೆ.

ಕೇರಳದ ಕಲ್ಲಪಳ್ಳಿ ಕಡೆಯಿಂದ ಮಡಿಕೇರಿಗೆ ಹೋಗುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ದಿನಕರ ಸಣ್ಣ ಮನೆಯವರ ತೋಟದ ತೆಂಗಿನ ಮರಕ್ಕೆ ಗುದ್ದಿದ್ದು, ಗುದ್ದಿದ ರಭಸಕ್ಕೆ ಮರದಲ್ಲಿದ್ದ ತೆಂಗಿನ ಕಾಯಿಗಳು ನೆಲಕ್ಕೆ ಬಿದ್ದಿದೆ. ಬಳಿಕ ಕಾರು ನಿಯಂತ್ರಣ ತಪ್ಪಿ, ಪಕ್ಕದಲ್ಲಿದ್ದ ಚರಂಡಿಗೆ ವಾಲಿ ನಿಂತಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.


ಕಾರಿನಲ್ಲಿ ಚಾಲಕ ಸೇರಿ ಸಹ ಪ್ರಯಾಣಿಕರು ಓರ್ವರು ಇದ್ದರು ಎಂದು ತಿಳಿದುಬಂದಿದೆ.