














ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಇದರ ವತಿಯಿಂದ ಆ.೦೮ರಂದ ಆ.೧೪ರವರೆಗೆ ೭೫ನೇ ಸ್ವಾತಂತ್ರ್ಯ ದಿನಚಾರಣೆ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಾಧಿಕಾರಿ ಡಾ|| ಡಿ.ವೀರೆಂದ್ರ ಹೆಗ್ಗಡೆಯವರ ಆಶಯದಂತೆ ನಮ್ಮ ಊರು ನಮ್ಮ ಶ್ರದ್ಧಾ ಕೇಂದ್ರಸ್ವಚ್ಛತಾ ಸಪ್ತಾಹ” ಕಾರ್ಯಕ್ರಮವನ್ನು ಸುಳ್ಯ ತಾಲೂಕಿನ ಅನೇಕ ದೇವಸ್ಥಾನ, ದೈವಸ್ಥಾನ, ಸರಕಾರಿ ಶಾಲಾ ಆವರಣ, ಭಜನಾ ಮಂದಿರಗಳ ಆವರಣ ಹಾಗೂ ಬಸ್ ನಿಲ್ದಾಣಗಳಲ್ಲಿ ಒಟ್ಟು ೫೯ ಸ್ವಚ್ಛತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಯಿತು.











ತಾಲೂಕಿನಾದ್ಯಂತ ಒಟ್ಟು ೨೦ ದೇವಸ್ಥಾನಗಳ ಆವರಣ, ೧೫ ಭಜನಾ ಮಂದಿರಗಳ ಆವರಣ, ೧೯ ಸರಕಾರಿ ಶಾಲೆಗಳ ಆವರಣ, ೨ ಯುವಕ ಮಂಡಲದ ಆವರಣ ಹಾಗೂ ೨ ಬಸ್ ನಿಲ್ದಾಣದ ಆವರಣ, ೧ ಸಾರ್ವಜನಿಕರ ಸ್ಥಳ ಸೇರಿ ೫೯ ಸ್ಥಳಗಳಲ್ಲಿ ಜನಜಾಗೃತಿ ವೇದಿಕೆಯ ಗಣ್ಯರು, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಭಜನಾ ಮಂದಿರದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಸಹಕಾರದೊಂದಿಗೆ ಶೌರ್ಯ ವಿಪತ್ತು ತಂಡದವರು, ವಲಯದ ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಗಳು ಹಾಗೂ ಊರಿನ ಗ್ರಾಮಸ್ಥರು, ಸ್ಥಳಿಯ ಮತ್ತು ಶ್ರದ್ಧಾ ಕೇಂದ್ರ ಪದಾಧಿಕಾರಿಗಳು ಸೇರಿ ಒಟ್ಟು ೧೬೬೯ ಜನರು ಈ ಸ್ವಚ್ಛತಾ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಂಡರು.










