ಸ ಹಿ ಪ್ರಾ ಶಾಲೆ ಮುರುಳ್ಯ ಇಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು . ಶಾಲಾ ಮಕ್ಕಳ ವಿವಿಧ ರೀತಿಯ ವ್ಯಾಯಾಮದ ಬಳಿಕ ಧ್ವಜಾರೋಹಣವನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಅವಿನಾಶ್ ಡಿ. ನೆರವೇರಿಸಿದರು. ಬಳಿಕ ಎಲ್ಲರೂ ತಿರಂಗ ಹಿಡಿದು ಅಲೆಕ್ಕಾಡಿ ಪೇಟೆಯಲ್ಲಿ ಮಾನವ ಸರಪಳಿ ರಚಿಸಿ ಮೆರವಣಿಗೆ ಮಾಡಲಾಯಿತು.


















ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವನಿತಾ ಸುವರ್ಣ, ಉಪಾಧ್ಯಕ್ಷರಾದ ಕುಮಾರಿ ಜಾನಕಿ ಮುರುಳ್ಯ ,ಸದಸ್ಯರಾದ ಶ್ರೀಮತಿ ಶೀಲಾವತಿ ಗೋಳ್ತಿಲ, ಅವಿನಾಶ್ ಡಿ, ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಕೆ ಉಪಸಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇಂದಿನ ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ದಾನಿಗಳಾದ ಜನಾರ್ಧನ ಅಲೆಕ್ಕಾಡಿ, ಚಂದ್ರಶೇಖರ ಮಠ, ಧ್ರುವ ಕುಮಾರ್ ಕೇರ್ಪಡ, ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಣ್ಣ ಜಾಲ್ತಾರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶರತ್ ಕುಮಾರ್ ಅಲೆಕ್ಕಾಡಿ, ಎಣ್ಮೂರ್ ಕ್ಲಸ್ಟರ್ ಸಿ ಆರ್ ಪಿ ಗಳಾದ ಜಯಂತ ಕೆ , ಹಿರಿಯ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಣ್ಮೂರು ಕೆನರಾ ಬ್ಯಾಂಕ್ ಮತ್ತು ಬೆಳ್ಳಾರೆ ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಶಾಲಾ ಇಬ್ಬರು ಮಕ್ಕಳಿಗೆ ವಿದ್ಯಾರ್ಥಿ ನಿಧಿ ಪ್ರೋತ್ಸಾಹ ಧನವನ್ನು ವಿತರಿಸಿದರು .ತಿರಂಗ ರಂಗೋಲಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸುವ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಶಶಿಕಲಾ ಎಲ್ಲರನ್ನೂ ಸ್ವಾಗತಿಸಿ, ಶ್ರೀಮತಿ ಅರ್ಪಿತ ವಂದಿಸಿದರು. ಶ್ರೀಮತಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿ, ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು.










