ಮೊಸರು ಕುಡಿಕೆ ತಂಡದ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮ

0

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಯುವ ಕೇಸರಿ ತಂಡದ ಮೊಸರು ಕುಡಿಕೆ ಉತ್ಸವದ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮ ಆ.15ರಂದು ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಕೃಪಾ ಶಂಕರ ತುದಿಯಡ್ಕ ಹಾಗೂ ಕಲ್ಕುಡ ದೇವಸ್ಥಾನದ ಅರ್ಚಕರಾದ ತಿಮ್ಮಪ್ಪ ನಾವುರು ಮತ್ತು ಗುರುದತ್ತ ನಾಯಕ್ ಇವರ ಉಪಸ್ಥಿತಿಯಲ್ಲಿ ನಡೆಯಿತು.

ತಂಡದ ರೂವಾರಿ ದೇವಿಪ್ರಸಾದ್ ಅತ್ಯಾಡಿ ಮುಳ್ಯ ತಂಡದ ಸದಸ್ಯರಿಗೆ ಶುಭ ಹಾರೈಸಿ ತಂಡದ ನಿಯಮ ಹಾಗೂ ಶಿಸ್ತು ಕಾರ್ಯರೂಪದ ಬಗ್ಗೆ ತಿಳಿಸಿದರು. ಸುಮಾರು ಮೂರು ವರ್ಷ ಗಳಿಂದ ಮಂಗಳೂರು, ಪುತ್ತೂರು, ಕಡಬ, ಬೆಳ್ಳಾರೆ, ಸುಳ್ಯ, ಆಲೆಟ್ಟಿ ಹೀಗೆ ಯುವಕರ ತಂಡ ಮೊಸರು ಕುಡಿಕೆ ಉತ್ಸವದಲ್ಲಿ ಪಾಲ್ಗೊಂಡು ಅನೇಕ ಪ್ರಶಸ್ತಿ ಹಾಗೂ ಸಹಾಯ ಧನ ವನ್ನು ಊರಿನ ಅಸಹಾಯಕರಿಗೆ ಮತ್ತು ಅನಾರೋಗ್ಯ ಒಳಗದವರಿಗೆ ತುರ್ತು ಸಹಾಯ ಧನ ನೀಡುತ್ತಿದೆ.

ಈ ಸಂದರ್ಭದಲ್ಲಿ ತಂಡದ ಕಾರ್ಯಕರ್ತರು ಉಪಸ್ಥಿತರಿದ್ದರು.