ಆಲೆಟ್ಟಿ ಸದಾಶಿವ ದೇವಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

0

ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ ಹಾಗೂ ಆಟೋಟ ಸ್ಪರ್ಧೆಗಳು

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆಮತ್ತುಸಾರ್ವಜನಿಕರಿಗಾಗಿ ವಿವಿಧ ಆಟೊಟ ಸ್ಪರ್ಧೆಗಳು ಆ. 15 ರಂದು ಜರುಗಿತು.

ಅರಂಬೂರು ಭಾರದ್ವಾಜಾಶ್ರಮದ
ಕಾಂಚಿ ಕಾಮ ಕೋಟಿ ವೇದ ಪಾಠಶಾಲೆಯ ಗುರುಗಳಾದ ಪುರೋಹಿತ್ ವೆಂಕಟೇಶ ಶಾಸ್ತ್ರಿ ಯವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಉತ್ಸವದ ಆಟೋಟ ಸ್ಪರ್ಧೆಗಳಿಗೆ ದೀಪ ಪ್ರಜ್ವಲಿಸಿ ಜನ್ಮಾಷ್ಟಮಿ ಆಚರಣೆ ಕುರಿತು ಮಾತನಾಡಿ “ಕೃಷ್ಣ ಪರಮಾತ್ಮ ಆಟವನ್ನು ಮಾತ್ರ ಆಡಿರುವುದಲ್ಲ, ಜೀವನದ ಪಾಠವನ್ನು ನೀಡಿರುತ್ತಾನೆ. ಉರಿಯುತ್ತಿರುವ ದೀಪ ಮುಟ್ಟಿದಾಗ ಬಿಸಿಯ ಅನುಭವ ಆಗುವುದು ಸಹಜ. ಅದರಂತೆ ಗೊತ್ತಿದ್ದು ಗೊತ್ತಿಲ್ಲದೆಯೋ ಆತ್ಮ ಶುದ್ಧಿಯಿಂದ ದೇವರ ಸ್ಮರಣೆ ಮಾಡಿದಾಗ ಸಹಜವಾಗಿ ದೇವರು ಒಲಿಯುತ್ತಾನೆ ಎಂಬ ಸಂದೇಶ ನೀಡಿದರು.

ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಶ್ರೀಪತಿ ಬೈಪಡಿತ್ತಾಯರು ಅಧ್ಯಕ್ಷತೆ ವಹಿಸಿದ್ದರು. ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲಿಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯೃಕ್ಷ ತೀರ್ಥ ಕುಮಾರ್ ಕುಂಚಡ್ಕ, ದೇವಸ್ಥಾನದ ಆಡಳಿತಾಧಿಕಾರಿ ಶರತ್, ಸದಾಶಿವ ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ವೇದಿಕೆಯಲ್ಲಿಉಪಸ್ಥಿತರಿದ್ದರು.ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಸ್ವಾಗತಿಸಿ,
ಭ. ಸಂಘದ ಕಾರ್ಯದರ್ಶಿ ಪ್ರವೀಣ್ ಆಲೆಟ್ಟಿ ವಂದಿಸಿದರು.ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅಂಗನವಾಡಿ ಮಕ್ಕಳಿಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು, ಸಾರ್ವಜನಿಕರಿಗಾಗಿ ಮಡಕೆ ಒಡೆಯುವ ಸ್ಪರ್ಧೆ, ಭಕ್ತಿಗೀತೆ ಹಗ್ಗ ಜಗ್ಗಾಟ ಸ್ಪರ್ಧೆ ಗಳನ್ನು ಆಯೋಜಿಸಲಾಗಿತ್ತು.

ಸಂಜೆ ನಡೆದ ಸಮಾರಂಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು ವಿಜೇತರಿಗೆ ಬಹುಮಾನ ವಿತರಿಸಿದರು. ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ಗೌಡ ಕುಡೆಕಲ್ಲು, ಆಡಳಿತಾಧಿಕಾರಿ ಶರತ್, ಸಮಿತಿ ಸದಸ್ಯ ಹರಿಪ್ರಸಾದ್ ಗಬ್ಬಲ್ಕಜೆ, ಗಗನ್ ಬೈಪಡಿತ್ತಾಯ, ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನಾ ಸಂಘದ ಕೋಶಾಧಿಕಾರಿ ಸುಂದರ ಆಲೆಟ್ಟಿ ಬಹುಮಾನ ಪಟ್ಟಿ ವಾಚಿಸಿದರು.
ರಾಮಚಂದ್ರ ಆಲೆಟ್ಟಿ ಸ್ವಾಗತಿಸಿ,ಶಿವಪ್ರಸಾದ್ ಆಲೆಟ್ಟಿ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಾಮೂಹಿಕ ಕುಣಿತ ಭಜನೆ ನಡೆಯಿತು. ಆಗಮಿಸಿದ ಭಕ್ತಾದಿಗಳಿಗೆ ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.