ಕರ್ನಾಟಕ ಸಾವಯವ ಕೃಷಿ ಯೋಜನೆ , ಮಂಗಳ ಕಿಸಾನ್ ಸಮೃದ್ಧಿ ಬಂಟ್ವಾಳ ಇವರು ಕೊಡ ಮಾಡುವ ಅತ್ಯುತ್ತಮ ಸಾವಯವ ಕೃಷಿ ರೈತ ಪ್ರೋತ್ಸಾಹಕ ಪ್ರಶಸ್ತಿಗೆ ಕೂತ್ಕುಂಜ ಗ್ರಾಮದ ಅಜ್ಜಿಹಿತ್ಲು ಮಾಧವ ಎ.ಕೆ. ಹಾಗೂ ಎಡಮಂಗಲ ಗ್ರಾಮದ ಪೂಜಾರಿಮನೆ ಬಾಬು ಗೌಡ ಕೆ. ಅವರು ಭಾಜನರಾಗಿದ್ದಾರೆ.















ಆ. 10 ರಂದು ಬಿ ಸಿ ರೋಡ್ ನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈ ಯವರಿಂದ ಪ್ರಶಸ್ತಿ ಮತ್ತು ಸನ್ಮಾನ ಸ್ವೀಕರಿಸಿದರು.










