“ಅಮ್ಮ ಚಿಣ್ಣರ ಮನೆ “ಆಶ್ರಯ ದಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಹಾಗೂ ಶ್ರೀ ಕೃಷ್ಣಾಷ್ಟಮಿ ಕಾರ್ಯಕ್ರಮದ ಪ್ರಯುಕ್ತ ಮುದ್ದು ಕೃಷ್ಣ ಮತ್ತು ಮುದ್ದು ರಾಧಾ ಸ್ಪರ್ಧೆಯು ಯುವಜನ ಸಂಯುಕ್ತ ಮಂಡಳಿ ಸಬಾಭವನ ದಲ್ಲಿ ನಡೆಯಿತು.








ಮಾ. ಭುವನ್ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಚಿತ್ರಾ ಮಟ್ಟಿ ಮುಖ್ಯ ಅತಿಥಿ ಗಳಾಗಿ ಶುಭ ಹಾರೈಸಿದರು. ಯುವಜನ ಸಂಯುಕ್ತ ಮಂಡಳಿ ಕಾರ್ಯದರ್ಶಿ ನಮಿತಾ ಹರ್ಲಡ್ಕ ಬಹುಮಾನ ವಿತರಿಸಿದರು. ಪೋಷಕ ಸಮಿತಿ ಅಧ್ಯಕ್ಷರಾದ ಹರಿಪ್ರಸಾದ್ ಅತ್ಯಾಡಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಶೈಲೇಶ್ ಅಂಬೆಕಲ್ಲು, ಪ್ರಸನ್ನ ಐವರ್ನಾಡು, ಪೋಷಕ ಸಮಿತಿ ಉಪಾಧ್ಯಕ್ಷರಾದ ಡಾ. ಅಮಿತ್ ಕುಮಾರ್, ರೋಹಿಣಿ ಕುಲದೀಪ್, ಸಮಿತಿ ಸದಸ್ಯರಾದ ನಿಶ್ಮಿತಾ ಧನಂಜಯ, ಭವ್ಯ ನಿತಿನ್, ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು. ಅಶ್ವಿನಿ ಶೈಲೇಶ್ ಅಂಬೆಕಲ್ಲು ಹಾಗೂ ಸುನಿತಾ ಸುಧೀರ್ ಕಾರ್ಯಕ್ರಮ ನಿರ್ವಹಿಸಿದರು.










