ಜೋತ್ಸ್ನಾ ಜಯಪ್ರಕಾಶ್ ಹೊದ್ದೆಟ್ಟಿಗೆ ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಪ್ರಥಮ

0

ಅಗೋಸ್ತು 9 ರಂದು ಶಿವಮೊಗ್ಗ ಓಪನ್ 6ನೇ ಇಂಟರ್ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ – 2025ರಲ್ಲಿ ಭಾಗವಹಿಸಿ ಕುಮಿಟೆಯಲ್ಲಿ ಪ್ರಥಮ ಸ್ಥಾನ ಮತ್ತು ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.ಅವರಿಗೆ ತರಬೇತಿಯನ್ನು ಕರಾಟೆ ಗುರುಗಳಾದ ಚಂದ್ರಶೇಖರ ಕನಕಮಜಲು ಮತ್ತು ಹಿತೇಶ್ ನೀಡಿರುತ್ತಾರೆ. ಜೋತ್ಸ್ನಾ ರವರು
ಜಯಪ್ರಕಾಶ್ ಪಿ.ಹೊದ್ದೆಟ್ಟಿ ಮತ್ತು ಪೆರಾಜೆ ಜ್ಯೋತಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ವೀಣಾ ಕೆ.ಎಸ್. ದಂಪತಿಯ ಪುತ್ರಿ. ಕೊಡಿಯಾಲಬೈಲ್ ಎಂ.ಜಿ.ಎಂ.ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ.