ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಶಿಲಾನ್ಯಾಸ ಮತ್ತು ಭೂಮಿ ಪೂಜನ

0

ಎಲ್ಲವೂ ಭಗವಂತನ ಇಚ್ಛೆ, ನೂತನ ಮಂದಿರದ ನಿರ್ಮಾಣ ಅತಿ ಶೀಘ್ರದಲ್ಲಿ ಆಗಲಿ: ಸುಧಾಕರ ಕಾಮತ್ ವಿನೋಬನಗರ

ಜಾಲ್ಸೂರು ಗ್ರಾಮದ ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ ನೂತನ ಭಜನಾ ಮಂದಿರ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಆ.18ರಂದು ನಡೆಯಿತು. ಪೂ.10-20ರ ತುಲಾ ಲಗ್ನ ಮುಹೂರ್ತದಲ್ಲಿ ನೂತನ ಶ್ರೀಕೃಷ್ಣ ಭಜನಾ ಮಂದಿರ ನಿರ್ಮಾಣಕ್ಕೆ
ಶಿಲಾನ್ಯಾಸ ಹಾಗೂ ಭೂಮಿ ಪೂಜನ ಕಾರ್ಯಕ್ರಮ ನೆರವೇರಿತು.

ವೇದಮೂರ್ತಿ ಪುರೋಹಿತ ನಾಗರಾಜ ಭಟ್ ವೈದಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಉದ್ಯಮಿ ಹಾಗೂ ಕನಕಮಜಲು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಕಾಮತ್ ವಿನೋಬನಗರ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಎಲ್ಲವೂ ಭಗವಂತನ ಇಚ್ಛೆ, ಹಾಗಾಗಿ ಈ ಪುಣ್ಯದ ಕೆಲಸ ಅತಿ ಶೀಘ್ರವಾಗಿ ಆಗಲಿ ಎಂದು ಶುಭ ಹಾರೈಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡ ನಾಯಿರ್‌ಹಿತ್ಲು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅಡ್ಕಾರ್ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರ್,
ಭಜನಾಮಂದಿರದ ಗೌರವಾಧ್ಯಕ್ಷ ರುಕ್ಕಯ್ಯಗೌಡ ಎಸ್.ಎನ್. ನಡುಮನೆ, ಕುಕ್ಕನ್ನೂರು ಶ್ರೀ ಕಿನ್ನಿಮಾನಿ ಪೂಮಣಿ ಉಳ್ಳಾಕುಲು ದೇವಸ್ಥಾನದ ಮೊಕ್ತೇಸರರಾದ ಬಾಲಕೃಷ್ಣ ಗೌಡ ಎನ್. ನಡುಬೆಟ್ಟು, ಸೋಣಂಗೇರಿ ಶ್ರೀ ವಿಷ್ಣುಮೂರ್ತಿ ವಯನಾಟ್‌ ಕುಲವನ್ ದೈವಸ್ಥಾನದ ಗೌರವಾಧ್ಯಕ್ಷ ಮನ್ಮಥ. ಎಸ್.ಎನ್. ನಡುಮನೆ, ಜಾಲ್ಸೂರು ಗ್ರಾ.ಪಂ.ಅಧ್ಯಕ್ಷೆ ಸಾವಿತ್ರಿ ಅಡ್ಕಾರುಬೈಲು, ಗ್ರಾ.ಪಂ.ಸದಸ್ಯರಾದ ಈಶ್ವರ ನಾಯ್ಕ ಸೋಣಂಗೇರಿ, ಸೋಣಂಗೇರಿ ವಿದ್ಯಾಗಿರಿ ಅಯ್ಯಪ್ಪ ದೇವಸ್ಥಾನದ
ನಾಗರಾಜ ಗುರುಸ್ವಾಮಿ, ಕುಕ್ಕನ್ನೂರು ಶ್ರೀ ಬಾಲಮುರುಗನ್ ದೇವಸ್ಥಾನದ ಅಧ್ಯಕ್ಷ ದೇವೇಂದ್ರ ಕುಕ್ಕನೂರು, ಸೋಣಂಗೇರಿ ಮುತ್ತುಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಮಹೇಶ್ವರನ್ ಸೋಣಂಗೇರಿ, ರವೀಂದ್ರನಾಥ್ ಎಸ್.ಎನ್., ನಡುಮನೆ, ನೋಟರಿ ವಕೀಲರಾದ ದೇವಿಪ್ರಸಾದ್ ಆಳ್ವ ಸೋಣಂಗೇರಿ, ನಿವೃತ್ತ ಯೋಧ ಬಾಲಚಂದ್ರ ಎಸ್.ಕೆ. ಕೆಳಮನೆ, ಗಿರೀಶ್ ನಾಯಕ್, ಕುಕ್ಕನ್ನೂರು, ವೆಂಕಟ್ ವಳಲಂಬೆ, ಸುಪ್ರೀತ್ ಮೋಂಟಡ್ಕ ಮತ್ತಿತರರು ಉಪಸ್ಥಿತರಿದ್ದರು.

ಶ್ರೀಕೃಷ್ಣ ಭಜನಾ ಮಂದಿರದ ಸಂಚಾಲಕ ಸತ್ಯಶಾಂತಿ ತ್ಯಾಗ ಮೂರ್ತಿ, ಕಾರ್ಯದರ್ಶಿ ನಿರಂಜನ ಮಿತ್ತಬೈಲು, ಕೋಶಾಧಿಕಾರಿ ಲೀಲಾವತಿ ನಡುಮನೆ, ಪದಾಧಿಕಾರಿಗಳು ಹಾಗು ಸದಸ್ಯರು ಇದ್ದರು.

ಸಂಚಾಲಕ ಸತ್ಯಶಾಂತಿ ತ್ಯಾಗ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ನೂತನ ಭಜನಾ ಮಂದಿರದ ಶಿಲಾನ್ಯಾಸ ಪ್ರಯುಕ್ತ ಆ.15ರಿಂದ ವಿವಿಧ ಕಾರ್ಯಕ್ರಮಗಳು ನಡೆಯಿತು. ಊರಿನ ಮತ್ತು ಪರ ಊರಿನ ಸಾಕಷ್ಟು ಮಂದಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು