ಗುತ್ತಿಗಾರು ರಬ್ಬರ್ ಸೊಸೈಟಿ ಉಪಾಧ್ಯಕ್ಷರಾಗಿರುವ ಶ್ರೀಮತಿ ಸರೋಜಿನಿ ಗಂಗಯ್ಯ ಮುಳುಗಾಡುರವರು ಅಸೌಖ್ಯದಿಂದ ಇಂದು ಮುಂಜಾನೆ 8.30ರ ಸುಮಾರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಕೆಲ ವರ್ಷಗಳಿಂದ ಬಿಳಿರಕ್ತಕಣ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಂಗಳೂರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆ.21ರಂದು ಅಸ್ಚಸ್ಥಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.















ಮಂಗಳೂರಿನಿಂದ ಮೃತದೇಹ ಇನ್ನಷ್ಟೆ ಮುಳುಗಾಡು ಮನೆಗೆ ಬರಬೇಕಾಗಿದ್ದು, ಸಂಜೆ ಅಂತ್ಯಸಂಸ್ಕಾರ ನಡೆಸಲಾಗುವುದೆಂದು ಮನೆಯವರು ತಿಳಿಸಿದ್ದಾರೆ.
ಶ್ರೀಮತಿ ಸರೋಜಿನಿ ಯವರು ಗುತ್ತಿಗಾರು ರಬ್ಬರ್ ಸೊಸೈಟಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರಲ್ಲದೆ, ಹಿಂದೆ ಸುಳ್ಯ ಟಿಎಪಿಸಿಎಂಎಸ್ ಸೊಸೈಟಿಯ ನಿರ್ದೇಶಕರಾಗಿ, ವಳಲಂಬೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಹೀಗೆ ಹಲವು ಸಂಘ ಸಂಘ ಸಂಸ್ಥೆಯಲ್ಲಿ ದುಡಿದಿದ್ದರು.
ಮೃತರು ಪುತ್ರ ಸನತ್ ಮುಳುಗಾಡು, ಪುತ್ರಿಯರಾದ ಡಾ. ನವ್ಯ, ದಿವ್ಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










