ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸೋಣ ಶನಿವಾರ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮೊದಲ ಸೋಣ ಶನಿವಾರ ಆ. 23 ರಂದು ನಡೆಯಿತು.

ಬೆಳಗ್ಗೆ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಭಜನಾ ಸೇವೆ ನಡೆಯಿತು. ಅರ್ಚಕ ಸತ್ಯೇಶ್ ಪಾಂಗಣ್ಣಾಯ ದೀಪ ಬೆಳಗಿಸಿದರು. ನೂರಾರು ಭಕ್ತಾದಿಗಳು ಮಧ್ಯಾಹ್ನದ ಮಹಾಪೂಜೆಯಲ್ಲಿ ಅನ್ನಪ್ರಸಾದ ಸ್ವೀಕರಿಸಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ಸದಸ್ಯರುಗಳಾದ ಹೇಮಚಂದ್ರ ಕುತ್ಯಾಳ, ಪುರುಷೋತ್ತಮ ನಂಗಾರು, ವಿಜಯ್ ಕುಮಾರ್ ನರಿಯೂರು, ವಿನೋದ್ ಮಹಾಬಲಡ್ಕ, ಸುಮತಿ ಹುಲಿಮನೆ, ಸೌಮ್ಯ ಬೈತಡ್ಕ, ಭಾರತಿ ಕೋನಡ್ಕಪದವು, ನಿಕಟಪೂರ್ವ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಸೇರಿದಂತೆ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಉತ್ಸವ ಸಮಿತಿಯ ಪದಾಧಿಕಾರಿಗಳು, ಬೈಲುವಾರು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.