ಅಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆಯು ಆ. 2 ರಂದು ಮಹಿಳಾಮಂಡಲದ ಕಟ್ಟಡದಲ್ಲಿ ನಡೆಯಿತು.
ಮಹಿಳಾಮಂಡಲದ ಅದ್ಯಕ್ಷೆ ಶ್ರೀಮತಿ ಜಲಜಾಕ್ಷಿ ರೈ ಅಧ್ಯಕ್ಷತೆ ವಹಿಸಿದ್ದರು. ಮುಂದಿನ 2025- 26 ನೇ ಸಾಲಿನ ಅವಧಿಗೆ ಹಿಂದಿನ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.
ಮಹಿಳಾಮಂಡಲದ ಗೌರವಾಧ್ಯಕ್ಷೆ ಯಶೋದ ಕುಡೆಕಲ್ಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.















ಶಿಕ್ಷಕಿ ಯಶೋಧ ಗುಂಡ್ಯ ರವರು ಪ್ರಾರ್ಥಿಸಿದರು.
ಉಷಾ ಆಲೆಟ್ಟಿ ಸ್ವಾಗತಿಸಿ,
ಉಪಾಧ್ಯಕ್ಷೆ ಗೀತಾ ಸುಧಾಮ ಆಲೆಟ್ಟಿ ವಂದಿಸಿದರು. ಕೋಶಾಧಿಕಾರಿ ಜಾನಕಿ ಮೈಂದೂರು ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಸರೋಜಿನಿ ಬಾರ್ಪಣೆ ವರದಿ ವಾಚಿಸಿದರು.
ಮಹಿಳಾ ಮಂಡಲದ ಸದಸ್ಯರು ಮನೆಯಲ್ಲಿಯೇ ತಯಾರಿಸಿ ತಂದ ವಿಶೇಷ ಆಹಾರ ಖಾದ್ಯಗಳನ್ನು ಮಧ್ಯಾಹ್ನ ಭೋಜನದಲ್ಲಿ ಬಡಿಸಲಾಯಿತು.










