ಕುಕ್ಕೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ರತ್ನಾಕರ ಸುಬ್ರಹ್ಮಣ್ಯ

0

ಕಾರ್ಯದರ್ಶಿ ಶಿವರಾಮ ಕಜೆಮೂಲೆ, ಕೋಶಾಧಿಕಾರಿ ದಯಾನಂದ ಕಲ್ನಾರ್

ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ವಾರ್ಷಿಕ ಮಹಾಸಭೆ ಆ. 23 ರಂದು ವಿಷ್ಣು ವೈಭವ ಹೋಟೆಲ್ ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರಸಕ್ತ ಅಧ್ಯಕ್ಷರಾದ ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರ ವಿಶ್ವನಾಥ್ ನಡುತೋಟ ಅವರು ವಹಿಸಿದ್ದರು.

ಸಭೆಯ ಆರಂಭದಲ್ಲಿ 2024–25ನೇ ಸಾಲಿನ ಲೆಕ್ಕಪತ್ರ ಮಂಡನೆಯಾಗಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ಪ್ರೆಸ್ ಮೀಟ್‌ಗಳು, ಕಾರ್ಯಕ್ರಮಗಳು ಹಾಗೂ ವಿವಿಧ ಚಟುವಟಿಕೆಗಳ ಕುರಿತು ಚರ್ಚೆ ನಡೆಯಿತು.

ನಂತರ 2025–26ನೇ ಸಾಲಿನ ನೂತನ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ಜರುಗಿತು.
ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ವರದಿಗಾರ ರತ್ನಾಕರ ಸುಬ್ರಹ್ಮಣ್ಯ, ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ
ಶಿವರಾಮ ಕಜೆಮೂಲೆ, ಕೋಶಾಧಿಕಾರಿಯಾಗಿ ಉದಯವಾಣಿ ಪತ್ರಿಕೆಯ ವರದಿಗಾರ ದಯಾನಂದ ಕಲ್ನಾರ್ ಆಯ್ಕೆಯಾದರು.


ಉಪಾಧ್ಯಕ್ಷರಾಗಿ ಕನ್ನಡಪ್ರಭ ಪತ್ರಿಯ ವರದಿಗಾರ ಪ್ರಕಾಶ್ ಸುಬ್ರಹ್ಮಣ್ಯ, ಜತೆ ಕಾರ್ಯದರ್ಶಿಯಾಗಿ ವಿಶ್ವವಾಣಿ ಪತ್ರಿಯ ವರದಿಗಾರ ಸಂತೋಷ್ ಸುಬ್ರಹ್ಮಣ್ಯ ಆಯ್ಕೆಯಾದರು. ನಿರ್ದೇಶಕರಾಗಿ ಪ್ರಜಾವಾಣಿ ಪತ್ರಿಕೆಯ ವರದಿಗಾರ ಲೊಕೇಶ್ ಬಿ.ಎನ್, ನ್ಯೂಸ್ ಪ್ಯಾಡ್ ಸಂಪಾದಕ ಶಿವ ಭಟ್, ಕೊಂಬಾರು ಸಿರಿ ವಾಹಿನಿಯ ಗಣೇಶ್ ಅನಿಲ, ಸ್ಪೀಡ್ ನ್ಯೂಸ್ ವರದಿಗಾರ ನಾಗೇಶ್, ಈ ಟಿವಿ ಭಾರತ್ ವರದಿಗಾರ ಪ್ರಕಾಶ್ ಕೋಡಿಂಬಾಳ ಇರಲಿದ್ದಾರೆ.