ಆ.30 – 31 : ಸುಬ್ರಹ್ಮಣ್ಯದಲ್ಲಿ ಉಚಿತ ಶ್ರವಣ ತಪಾಸಣೆ, ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ

0

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ನೇತೃತ್ವದಲ್ಲಿ, ವಿವಿಧ ಸಂಘಟನೆಗಳ ಸಹಯೋಗದೊ‌ಂದಿಗೆ

ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಕಾರ್ಯಕ್ರಮ ಆ. 30 ಹಾಗೂ ಆ. 31 ರಂದು ನಡೆಯಲಿದೆ.

ಕಾರ್ಯಕ್ರಮ ಶ್ರೀ ಸುಬ್ರಹ್ಮಣ್ಯ ಮರ ಅವರಣದಲ್ಲಿ ನಡೆಯಲಿದೆ. ಟೀಮ್ ಈಶ್ವರ್ ಮಲ್ಪೆ ಹಾಗೂ ಸುಬ್ರಹ್ಮಣ್ಯ ಮಠ ಇವರು ಆಯೋಜಿಸಿರುವ ಈ ಶಿಬಿರವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ. ನೋಂದಣಿ ಕಡ್ಡಾಯವಾಗಿದ್ದು ಶ್ರವಣ ಪರೀಕ್ಷೆಯ ಬರುವವರು ಹಳೆಯ ವರದಿ ಇದ್ದರೆ ಜೊತೆಯಲ್ಲಿ ತರುವಂತೆ ಕೋರಲಾಗಿದೆ. ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು. ಈಶ್ವರ್ ಮಲ್ಲೆ ಟೀಮ್‌ ನವರು ದೇಣಿಗೆ ಮೊತ್ತದಿಂದ 40% ಶ್ರವಣ ಸಾಧನದ ಮೊತ್ತವನ್ನು ಪಾವತಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. ಅಸಕ್ತರು 9902344399, 9448548574 ನಂಬರ್ ಸಂಪರ್ಕಿಸುವಂತೆ ಕೋರಲಾಗಿದೆ.