ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ೩ ದಿನಗಳ ತುರ್ತು ಜೀವಾಧಾರ ತರಬೇತಿ ಕಾರ್ಯಗಾರ 2025

0

ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಬಾಯಿ, ಮುಖ ಮತ್ತು ದವಡೆಯ ಶಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ ತುರ್ತು ಜೀವಾಧಾರ ತರಭೇತಿ ಕಾರ್ಯಗಾರವನ್ನು ಜೀವರಕ್ಷಾ ಟ್ರಸ್ಟ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಇವರುಗಳ ಸಹಯೋಗದೊಂದಿಗೆ ಆ. ೨೦, ೨೧, ೨೨ರಂದು ಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಕೆ.ವಿ.ಜಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್, ದೀಪ ಬೆಳಗಿಸಿ ಉದ್ಘಾಟಿಸಿ ಇದರ ಪ್ರಾಮುಖ್ಯತೆಯನ್ನು ವಿವರಿಸಿದರು.


ಈ ಸಂದರ್ಭದಲ್ಲಿ ಜೀವರಕ್ಷಾ ಟ್ರಸ್ಟ್ ಇದರ ವಿಭಾಗಿಯ ಸಂಯೋಜಕರಾದ ಕು. ಶ್ರಾವ್ಯ, ಬಾಯಿ, ಮುಖ ಮತ್ತು ದವಡೆಯ ಶಸ್ತ್ರ ಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್, ಕೆ.ವಿ.ಜಿ ದಂತ ಮಹಾವಿದ್ಯಾಲಯದ ವಿಭಾಗ ಮುಖ್ಯಸ್ಥರುಗಳು ಮತ್ತು ಕಾರ್ಯಗಾರದ ಸಂಯೋಜಕರಾದ ಡಾ. ದಿಬಾಕರ್ ಸುತ್ರಧಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮಹಾಬಲೇಶ್ವರ ಸಿ. ಹೆಚ್., ಡಾ. ದೇವಿ ಪ್ರಸಾದ್, ಡಾ. ಅಲ್ವಿನ್ ಆಂಟೋನಿ, ಡಾ. ಸಂದೀಪ್ ಬಿ.ಎಸ್. ಉಪಸ್ಥಿತರಿದ್ದರು.

ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ. ಉಪಸ್ಥಿತರಿದ್ದರು. ೯೮ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿದರು. ತುರ್ತು ಜೀವಾಧಾರ ಕಾರ್ಯಕ್ರಮವೆಂದರೇನು, ಅದನ್ನು ಮಾಡುವ ಬಗೆ ಹೇಗೆ ಮತ್ತು ಮಹತ್ವದ ಕುರಿತು ಪ್ರಾತ್ಯಕ್ಷತೆಯ ಮೂಲಕ ಮಾಹಿತಿ ನೀಡಲಾಯಿತು. ಯಾವುದೇ ಜಾಗದಲ್ಲಿ ಎಂಥಹುದೇ, ಪರಿಸ್ಥಿತಿಯಲ್ಲಿ ಒಬ್ಬ ಮನುಷ್ಯನ ಜೀವವನ್ನು ಉಳಿಸಲು ಬೇಕಾಗುವಂತಹ ಚಾಕಚಕ್ಯತೆ ಮತ್ತು ತಿಳುವಳಿಕೆಯನ್ನು ಕಿರುಚಿತ್ರಗಳ ಮೂಲಕ ನೀಡಿದರು. ಹಾಗೂ ಮನುಷ್ಯನ ಮಾದರಿಗಳ ಮೇಲೆ ಕೃತಕ ಉಸಿರಾಟ ಹಾಗೂ ಇತರ ತುರ್ತು ಜೀವಾಧಾರ ಕಾರ್ಯಕ್ರಮವನ್ನು ಮಾಡಿ ವಿದ್ಯಾರ್ಥಿಗಳಿಗೆ ತೋರಿಸಲಾಯಿತು.

ನಂತರದಲ್ಲಿ ಇವರುಗಳ ಮೇಲ್ವಿಚಾರಣೆಯಡಿಯಲ್ಲಿ ಆ ವಿಧಾನಗಳನ್ನು ಇಲ್ಲಿ ದಂತ ವೈದ್ಯ ವಿದ್ಯಾರ್ಥಿಗಳು ನಡೆಸಿದರು ಮತ್ತು ಇವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಡಾ. ಪ್ರಸನ್ನ ಕುಮಾರ್ ರವರು ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಡಾ. ಡಾ. ದಿಬಾಕರ್ ಸುತ್ರಧಾರ್ ವಂದಿಸಿದರು. ಡಾ. ಶಶಾಂಕ್ ಮತ್ತು ಡಾ. ಗಾಯತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.