ದರ್ಖಾಸ್ತು : ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

0

ಶವವನ್ನು ಬಾವಿಯಿಂದ ಮೇಲೆತ್ತಿದ ಪೈಚಾರಿನ ಮುಳುಗು ತಜ್ಞರು

ಐವರ್ನಾಡು ರಬ್ಬರ್ ಫ್ಯಾಕ್ಟರಿ ಬಳಿ 10 ನೇ ತರಗತಿ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ
ಘಟನೆ ಇಂದು ನಡೆದಿದೆ.
ಮನೆ ಸಮೀಪದ ಸಾರ್ವಜನಿಕ ಬಾವಿಗೆ ಕೌಶಿಕ್ ಕುಮಾರ್ ಎಂಬ ವಿದ್ಯಾರ್ಥಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಪೈಚಾರಿನ ಮುಳುಗು ತಜ್ಞರು ಬಂದು ಬಾವಿಯಿಂದ ಮೃತದೇಹವನ್ನು ಮೇಲೆತ್ತಿದರು.
ಪೈಚಾರ್ ಮುಳುಗು ತಜ್ಞರಾದ ಅಬ್ಬಾಸ್ ಶಾಂತಿನಗರ ಹಾಗೂ ಬಶೀರ್ ಆರ್ .ಬಿ , ಅಶ್ರಫ್ ಅಚ್ಚಪ್ಪು ರವರು ಬಾವಿಗೆ ಇಳಿದು ಮೃತ ದೇಹವನ್ನು ಮೇಲೆತ್ತಿದರು.
ಬಳಿಕ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತು.
ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ವಿದ್ಯಾರ್ಥಿ ಸುಳ್ಯದ ಖಾಸಗಿ ಶಾಲಾ 10 ನೇ ತರಗತಿ ವಿದ್ಯಾರ್ಥಿಯಾಗಿದ್ದು ತಂದೆ ವಿಜಯಕಾಂತ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.