ಸುವರ್ಣ ನ್ಯೂಸ್ ನಲ್ಲಿ ಹಿರಿಯ ಉಪ ಸಂಪಾದಕಿಯಾಗಿರುವ ಸುಳ್ಯದ ಗೌತಮಿ ಕೊಯಿಂಗುಳಿಯವರು ಪ್ರತಿಷ್ಠಿತ ಟಿಎನ್ಐಟಿ ಮಾಧ್ಯಮ ಸಂಸ್ಥೆಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.








ಪ್ರತಿಷ್ಠಿತ ಟಿಎನ್ಐಟಿ ಸಂಸ್ಥೆ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಕಳೆದ ಎಂಟು ವರ್ಷಗಳಿಂದ ಮಾಧ್ಯಮದ ಜವಾಬ್ದಾರಿಯನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದ್ದು, ಈ ಬಾರಿ ದಕ್ಷಿಣ ಭಾರತದ ಎಲ್ಲ ಮಾಧ್ಯಮಗಳಲ್ಲಿ ಸಾಧನೆ ಮಾಡಿದ ಪತ್ರಕರ್ತರಿಗೂ ಪ್ರಶಸ್ತಿ ನೀಡಿ ಗೌರವಿಸಿದೆ. ನಟ ರಘು ಭಟ್ ನೇತೃತ್ವದಲ್ಲಿ ಆಯೋಜಿಸಲಾದ ಟಿಎನ್‌ಐಟಿ ದಕ್ಷಿಣ ಭಾರತೀಯ ಮಾಧ್ಯಮ 2025 ರ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ಬೆಸ್ಟ್ ವಾಯ್ಸ್ ಓವರ್ ಫೀಮೇಲ್ ಕ್ಯಾಟಗರಿಯಲ್ಲಿ ಗೌತಮಿ ಕೊಯಿಂಗುಳಿಯವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ರಾಜ್ಯದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಗೌತಮಿ ಪ್ರಸ್ತುತ ಸುವರ್ಣ ನ್ಯೂಸ್ ನಲ್ಲಿ ಹಿರಿಯ ಉಪ ಸಂಪಾದಕಿ ಯಾಗಿದ್ದು ವಾಯಿಸ್ ಓವರ್ ಕೂಡಾ ನೀಡುತ್ತಿದ್ದಾರೆ.

ಗೌತಮಿಯವರು ಕುಕ್ಕುಜಡ್ಕ ದ ಗಂಗಾಧರ ಗೌಡ ಕೊಯಿಂಗುಳಿ ಮತ್ತು ರಾಜೀವಿ ದಂಪತಿಯ ಪುತ್ರಿ.










