ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲ ಚೇತನರ ಮನೆ ಬಾಗಿಲಿಗೆ ಯು ಡಿ ಐ ಡಿ ಆಗಸ್ಟ್ ಮಾಸಾಚರಣೆ ಮತ್ತು ತಾಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಕ್ಯಾಂಪ್ ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಆ. 26 ರಂದು ನಡೆಯಿತು.

ಆರಂಭದಲ್ಲಿ ಯು ಡಿ ಐ ಡಿ ಮಾಸಾಚರಣೆ ನಡೆಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ವೈದ್ಯಾದಿಕಾರಿ ಡಾ.ನವೀನ್ ವಹಿಸಿದ್ದರು.
















ಎಂ.ಅರ್.ಡಬ್ಲ್ಯೂ ಚಂದ್ರಶೇಖರ್, ಪ್ರವೀಣ್ ನಾಯಕ್, ಪುಟ್ಟಣ್ಣ ವಿ ವೇದಿಕೆಯಲ್ಲಿದ್ದು ವಿಕಲಚೇತನರಿಗೆ ಯು ಡಿ ಐ ಡಿ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು.
ಚಂದ್ರಶೇಖರ್ ಸ್ವಾಗತಿಸಿ, ಪ್ರವೀಣ್ ನಾಯಕ್ ವಂದಿಸಿದರು.
ನಂತರ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ರಿನೀವಲ್ ಮಾಡುವ ಕ್ಯಾಂಪ್ ನಡೆಯಿತು. ತಾಲೂಕು ಪಂಚಾಯತ್ ವಿಕಲಚೇತನ ಇಲಾಖೆಯ ಎಂ
ಅರ್ ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ವಿಕಲಚೇತನರ ಇಲಾಖೆಯ ಯು.ಅರ್.ಡಬ್ಲ್ಯೂ ಪ್ರವೀಣ್ ನಾಯಕ್ ತಾಲೂಕಿನ ಇತರ ಪಂಚಾಯತ್ ಗಳ ವಿ. ಅರ್ ಡಬ್ಲ್ಯೂ ರವರಾದ ಪುಟ್ಟಣ್ಣ ವಿ, ವರುಣ್ ಬಾಬು, ಭವ್ಯ, ಶರಣ್ಯ, ಲಿಖಿತ, ಮೇಘ ಶ್ರೀ, ಪವಿತ್ರ, ಸದಾನಂದ, ಕಾವೇರಿ, ಮೀನಾಕ್ಷಿ, ಉಮಾವತಿ, ಪುಷ್ಪಶ್ರೀ, ಕುಸುಮಾವತಿ, ಕೃಷ್ಣ ಪ್ರಸಾದ್, ಧರ್ಮಪಾಲ, ಷಣ್ಮುಖ, ಹರ್ಷಿತ್, ವೆಂಕಟ್ರಮಣ, ಉಮ್ಮರ್, ಸವಿತ, ಶ್ರೀಧರ್, ಆಶೀಸ್, ದಿನೇಶ್, ರಂಜಿನಿ, ದಾದಿ ನಯನ ಮತ್ತು ಡಾ. ನವೀನ್, ಬೆಳ್ತಂಗಡಿಯಿಂದ ಬಂದ ಎಲುಬು ತಜ್ಞ ಶಶಿಕಾಂತ್, ಮಂಗಳೂರ್ ನಿಂದ ಬಂದ ಮಾನಸಿಕ ತಜ್ಞರು ಮತ್ತು ಇತರ ಎಲ್ಲ ತಜ್ಞ ವೈದ್ಯರು ಹಾಜರಿದ್ದು ಸಹಕಾರ ನೀಡಿದರು. ಹಲವಾರು ಜನ ಇದರ ಪ್ರಯೋಜನ ಪಡೆದುಕೊಂಡರು.











