ಪಂಜ ದೇಗುಲದಲ್ಲಿ ಶ್ರೀ ಗಣೇಶ್ ಚತುರ್ಥಿ ಪ್ರಯುಕ್ತ ಅಪ್ಪಕಜ್ಜಾಯ ಸೇವೆ, ಕದಿರು ವಿತರಣೆ ,ನವಾನ್ನ ಭೋಜನ

0

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಆ.27 ರಂದು ಶ್ರೀ ದೇಗುಲದ ಕದಿರು ಗದ್ದೆಯಿಂದ ಕದಿರು ದೇಗುಲಕ್ಕೆ ತಂದು ಸಾನಿಧ್ಯಗಳಲ್ಲಿ ಹೊಸ್ತಾರೋಹಣ ಮಾಡುವ ಕಾರ್ಯಕ್ರಮ ನಡೆಯಿತು.


ಪೂರ್ವಾಹ್ನ ಮಹಾಪೂಜೆಯ ನಂತರ , ಅಪ್ಪಕಜ್ಜಾಯ , ಕದಿರು ವಿತರಣೆ, ಪ್ರಸಾದ ವಿತರಣೆ ನಡೆಯಿತು. ಪೂರ್ವಾಹ್ನ ಶ್ರೀ ಮಹಾಗಣಪತಿ ಹವನ ಮತ್ತು ಶ್ರೀ ದೇವರಿಗೆ ನವಾನ್ನ ಮಹಾ ನೈವೇದ್ಯ ಸಮರ್ಪಣೆ ಮಕ್ಕಳಿಗೆ ವಿದ್ಯಾರಂಭ , ಮಕ್ಕಳಿಗೆ ಅನ್ನಪ್ರಾಶನ , ನವಾನ್ನ ಭೋಜನ ನಡೆಯಿತು. ಮಹಾಪೂಜೆ , ಪ್ರಸಾದ ವಿತರಣೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ , ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.