ಅಂತರಾಷ್ಟ್ರೀಯ ಮಿಲಾದ್ ಸಮ್ಮೇಳನಕ್ಕೆ ಲತೀಫ್ ಹರ್ಲಡ್ಕ ಬಹರೈನ್ ಗೆ

0

ಕರ್ನಾಟಕ ಕಲ್ಚರಲ್ ಫೌಂಡೇಶನ್ ಬಹರೈನ್ ಇದರ ವತಿಯಿಂದ ಬಹರೈನ್ ನ ಮನಾಮದಲ್ಲಿರುವ ಕನ್ನಡ ಭವನದಲ್ಲಿ ಅ.29 ರಂದು ನಡೆಯಲಿರುವ ಅಂತರಾಷ್ಟ್ರೀಯ ಮಿಲಾದ್ ಸಮ್ಮೇಳನದಲ್ಲಿ ಸುಳ್ಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿ, ಎಲಿಮಲೆ ನುಸ್ರತ್ ಇಸ್ಲಾಂ ಅಸೋಸಿಯೇಶನ್ ಇದರ ಅಧ್ಯಕ್ಷ ಸಾಮಾಜಿಕ ಧುರಿಣ ಅಬ್ದುಲ್‌ ಲತೀಫ್ ಹರ್ಲಡ್ಕ ಅತಿಥಿಯಾಗಿ ಬಾಗವಹಿಸಲಿದ್ದಾರೆ.
ಅವರ ಜೊತೆ ಕರ್ನಾಟಕದಿಂದ ಸಯ್ಯದ್ ಅಬುಲ್ ರಹಿಮಾನ್ ಬಾಅಲವಿ ತಂಙಳ್ ಹಾಗೂ ರಾಜಕೀಯ ಮತ್ತು ಸಾಮಾಜಿಕ ಮುಖಂಡ ಇನಾಯತ್ ಆಲಿ ಮುಲ್ಕಿ ತೆರಳಿದ್ದಾರೆ.