ಮನೆ ವಿದ್ಯಾಲಯ,ದೇವಾಲಯದಂತೆ ಆಧಾರಾಲಯವೂ ಆಗಬೇಕು – ಈಶ್ವರ ಶರ್ಮ ಪಿ.ಚಾವಡಿಬಾಗಿಲು
ಇಂದು ಸಂಜೆ ಶ್ರೀ ದೇವರ ವೈಭವದ ಶೋಭಾಯಾತ್ರೆ – ಜಲಸ್ತಂಭನ
ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ,ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ 54 ವರ್ಷದ ಶ್ರೀ ಗಣೇಶೋತ್ಸವ ವು ಆ.27 ರಿಂದ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿದ್ದು ಆ.28 ರವರೆಗೆ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.

ಆ.27 ರಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿರಾಟ್ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಬೀಡು ಅಧ್ಯಕ್ಷತೆ ವಹಿಸಿದ್ದರು.
ಗುರುವಾಯನಕೆರೆ ಎಕ್ಸೆಲ್ ಪಿ.ಯು.ಕಾಲೇಜಿನ ಪ್ರಾಧ್ಯಾಪಕ ಈಶ್ವರ ಶರ್ಮ ಪಿ.ಚಾವಡಿಬಾಗಿಲು ಧಾರ್ಮಿಕ ಉಪನ್ಯಾಸ ನೀಡಿದರು.








ಬೆಳ್ಳಾರೆ ಅನುಪಮ ಮೆಡಿಕಲ್ಸ್ ನ ಶ್ರೀಮತಿ ಮಹಾಲಕ್ಷ್ಮೀ ಎನ್.ಭಟ್ ಮತ್ತು ಮನೋಜ್ ಪುತ್ತೂರು ಇವರನ್ನು ವಿರಾಟ್ ಫ್ರೆಂಡ್ಸ್ ವತಿಯಿಂದ ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್.ರೈ,ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,
ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು,ಗೌರಿಪುರ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ,ಉಜ್ರೋಳಿ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಪ್ರಮೋದ್ ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ವಿಶ್ವನಾಥ ಕೆ, ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಪದ್ಮನಾಭ ಬೀಡು,ಅರ್ನಾಡಿ ಕೆಟರಿಂಗ್ ನ ಸುಬ್ರಹ್ಮಣ್ಯ ಪ್ರಸಾದ್ ಅರ್ನಾಡಿ, ಭಾವೈಕ್ಯ ಯುವಕ ಮಂಡಲದ ಅಧ್ಯಕ್ಷ ಜಯಚಂದ್ರ ಪೆರುವಾಜೆ,ನೆಟ್ಟಾರು ಅಕ್ಷಯ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ ನೆಟ್ಟಾರು,ಲಯನ್ಸ್ ಕ್ಲಬ್ ಪೆರುವಾಜೆ ಜಲದುರ್ಗಾ ಅಧ್ಯಕ್ಷ ಯತೀಶ್ ಭಂಡಾರಿ,ಕೊಳಂಬಳ ಆರ್.ಕೆ.ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ದಾಸನಮಜಲು,ಶಾರದೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಉಮಿಕ್ಕಳ,ಗೌರಿಪುರಂ ತಪಸ್ವಿ ಫ್ರೆಂಡ್ಸ್ ಅಧ್ಯಕ್ಷ ಸಚಿನ್ ಕುಲಾಲ್ ಬಸ್ತಿಗುಡ್ಡೆ,ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಶಮಿತಾ ಪಿ.ರೈ ಪನ್ನೆ,ಶ್ರೀದೇವಿ ಶಾಮಿಯಾನದ ಕಿರಣ್ ಪೆರುವಾಜೆ,ಸೌರವ್ ಬ್ಯಾಡ್ಮಿಂಟನ್ ಕ್ಲಬ್ ಅಧ್ಯಕ್ಷ ಲೋಕೇಶ್ ಉಮಿಕ್ಕಳ,ಶಶಿಕಲಾ ಸೌಂಡ್ಸ್ ಮತ್ತು ಲೈಟಿಂಗ್ಸ್ ನ ಪ್ರಶಾಂತ್ ಪಟ್ಟೆ ಉಪಸ್ಥಿತರಿದ್ದರು.

ನಿಶ್ಮಿತಾ ಬೀಡು ಸನ್ಮಾನ ಪತ್ರ ವಾಚಿಸಿದರು.
ಹರ್ಷರಾಜ್ ಸ್ವಾಗತಿಸಿ,ಆಶಿಕಾ ಉಮಿಕ್ಕಳ ಪ್ರಾರ್ಥಿಸಿ,ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿ,ಕಾರ್ಯದರ್ಶಿ ಜೀವನ್ ಕಾವಿನಮೂಲೆ ವಂದಿಸಿದರು.
ಬೆಳಿಗ್ಗೆ ಗಂಟೆ 8.00 ಕ್ಕೆ ಶ್ರೀ ಗಣಪತಿ ಪ್ರತಿಷ್ಠೆ, ಪೂರ್ವಾಹ್ನ ಗಂಟೆ 9.00 ರಿಂದ ಸ್ಪರ್ಧೆಗಳು ಪ್ರಾರಂಭ, 9.30 ಕ್ಕೆ ಗಣಪತಿ ಹವನ,ಮದ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು.
ಗಂಟೆ ರಂಗಪೂಜೆ,ಮೂಡಸೇವೆ,ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಜೆ ಶ್ರೀ ಜಲದುರ್ಗಾದೇವಿ ಮಕ್ಕಳ ಕುಣಿತ ಭಜನಾ ತಂಡ ಪೆರುವಾಜೆ,ಸ್ನೇಹಾಂಜಲಿ ಮಕ್ಕಳ ಕುಣಿತ ಭಜನಾ ತಂಡ ಬೆಳ್ಳಾರೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ ಶ್ರೀ ಭಗವತಿ ಯಕ್ಷಗಾನ ಮಂಡಳಿ ಸಸಿಹಿತ್ಲು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ರೀ ಶರಣ್ ಕುಮಾರ್ ಬಜ್ಪೆ ವಿರಚಿತ ಯಕ್ಷಗಾನ ಬಯಲಾಟ – ಮಹಾಶಕ್ತಿ ಮಂತ್ರದೇವತೆ ನಡೆಯಿತು.

ಆ.28 ರಂದು ಬೆಳಿಗ್ಗೆ ಶ್ರೀ ಗಣಪತಿ ಅಥರ್ವಶೀರ್ಷ ಹವನ ಬಳಿಕ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡಿತು.ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಳ್ಳಾರೆ,ಕೊಳಂಬಳ ಶ್ರೀ ರಕ್ತೇಶ್ವರಿ ಭಜನಾ ಮಂಡಳಿಯವರಿಂದ,12.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯುತ್ತಿದೆ.
ಗಂಟೆ 1.00 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
1.30 ರಿಂದ ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ ,ಭಕ್ತವೃಂದ ಭಜನಾ ಮಂಡಳಿ ಬೆಳ್ಳಾರೆ ವತಿಯಿಂದ ಭಜನೆ ನಡೆಯಲಿದೆ.
ಸಾಯಂಕಾಲ 4.00 ರಿಂದ ಮಹಾಪೂಜೆ,ಮಂಗಳಾರತಿ,ಪ್ರಸಾದ ವಿತರಣೆ ನಡೆಯಲಿದೆ.
ನಂತರ ಶ್ರೀ ದೇವರ ವಿಜೃಂಭಣೆಯ ಶೋಭಾಯಾತ್ರೆ ಬೆಳ್ಳಾರೆ ಮುಖ್ಯ ಪೇಟೆಯಲ್ಲಿ ನಡೆದು ಗೌರಿಹೊಳೆಯಲ್ಲಿ ಜಲಸ್ತಂಭನ ನಡೆಯಲಿದೆ.










