ಆತ್ಮಹತ್ಯೆಯೋ – ಕೊಲೆಯೋ ? ಬಂಧುಗಳಿಗೆ ಶಂಕೆ
ಸುಳ್ಯದ ಪೈಚಾರು ಮೂಲದ ವಿವಾಹಿತ ಮಹಿಳೆಯೋರ್ವರು ಹಳೆಗೇಟು ಅಡ್ಕ ಬಳಿ ಬಾಡಿಗೆ ಮನೆಯಲ್ಲಿ ಇಂದು ಮಧ್ಯಾಹ್ನ ಮೃತಪಟ್ಟಿದ್ದು ಕೌಟುಂಬಿಕ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಆದರೆ ಘಟನೆ ನಡೆದ ಸಂದರ್ಭ ಆಕೆಯ ಪತಿ ಸ್ಥಳದಲ್ಲಿಯೇ ಇದ್ದು ಮನೆಯವರು ಪತ್ನಿಯ ಮನೆಯವರು ಬಂದ ಸಮಯ ಅಲ್ಲಿಂದ ಆತ ಪರಾರಿಯಾಗಿರುವುದರಿಂದ ಇದು ಕೊಲೆಯಾಗಿರಬಹುದೇ ಎಂಬ ಅನುಮಾನವೂ ಮೂಡಿರುವುದಾಗಿ ಹೇಳಲಾಗುತ್ತಿದೆ.
ಮನೆಯೊಳಗೆ ಕಿರುಚಾಡುವ ಶಬ್ದ ಕೇಳಿ ಸ್ಥಳೀಯರು ಹೋಗಿ ನೋಡುವ ಸಂದರ್ಭ ಮಹಿಳೆ ನೆಲದ ಮೇಲೆ ಬಿದ್ದಿದ್ದರು ಎನ್ನಲಾಗಿದೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಆದರೆ ಮಹಿಳೆ ಅಷ್ಟರಲ್ಲಿ ಮೃತ ಪಟ್ಟಿದ್ದರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಪೂರ್ಣ ಮಾಹಿತಿ ಪೊಲೀಸ್ ತನಿಖೆಯ ಬಳಿಕವೇ ತಿಳಿಯಬೇಕಾಗಿದೆ.
ಘಟನೆ ನಡೆದ ಕೂಡಲೇ ಮಹಿಳೆಯ ಪತಿ ಅಜ್ಜಾವರ ಮೂಲದ ಲತೀಫ್ ಎಂಬಾತ ಪರಾರಿಯಾಗಿದ್ದು ನಾನಾ ರೀತಿಯ ಚರ್ಚೆಗೆ ಕಾರಣ ವಾಗಿದೆ.















ಮೃತದೇಹ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ. ಸ್ಥಳದಲ್ಲಿ ಮಹಿಳೆಯ ಕುಟುಂಬ ಸದಸ್ಯರು ಹಾಗೂ ಸ್ಥಳೀಯರು ನೂರಾರು ಮಂದಿ ಜಮಾವಣೆ ಗೊಂಡಿದ್ದಾರೆ.

ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ಆರಂಭಿಸಿದ್ದಾರೆ.
ಮೃತ ಮಹಿಳೆಗೆ ಸಣ್ಣ ಸಣ್ಣ ಮೂವರು ಮಕ್ಕಳು ಇದ್ದು ತಂದೆ ಪೈಚಾರ್ ನಿವಾಸಿ ಲತೀಫ್ ಹಾಗೂ ತಾಯಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.










