ಮಾದರಿ ಅಮ್ಮ, ಪರಿಪೂರ್ಣತೆ ಸಾಧಿಸಿದವರು ನಮ್ಮವ್ವ :ಉಪನ್ಯಾಸಕಿ ಶ್ರೀಮತಿ ಉಷಾ
ಏನೆಕಲ್ಲು ಗ್ರಾಮದ ದಿl ದಶರಥ ಗೌಡ ಮಲ್ಲಾರ ಅವರ ಪತ್ನಿ ಶ್ರೀಮತಿ ಶೇಷಮ್ಮ ಮಲ್ಲಾರ ವೈಕುಂಠ ಸಮಾರಂಭ ಆ.30 ರಂದು ಮಲ್ಲಾರ ಮೃತರ ಮನೆಯಲ್ಲಿ ನಡೆಯಿತು.
















ಮೃತರ ಬಗ್ಗೆ ಸೈಂಟ್ ಫಿಲೋಮಿನ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಉಷಾ ಅವರು ನುಡಿನಮನ ಸಲ್ಲಿಸಿ ಮಾತನಾಡಿ ಬಹಳಷ್ಟು ಕಷ್ಟ ಪಟ್ಟು ಬದುಕು ರೂಪಿಸಿದ ಅವ್ವ ನಮವ್ವ, ಕೂಡು ಕುಟುಂಬ ಬೆಳೆಸಿದ ಅವ್ವ ತಮ್ಮ ಕರ್ತವ್ಯವನ್ನು ಕಟ್ಟು ನಿಟ್ಟಿನಲ್ಲಿ ಪಾಲಿಸಿ ಪರಿಪೂರ್ಣತೆ ಸಾಧಿಸಿದ ಮಾದರಿ ಅವ್ವ ನಮ್ಮ ಅವ್ವ ಎಂದರು . ಎಲ್ಲವನ್ನು ಪಡೆದ ಅವ್ವ ಮಕ್ಕಳು, ಮೊಮ್ಮಕ್ಕಳು ಎಲ್ಲಾ ವಿಚಾರದಲ್ಲಿ ಅದೃಷ್ಟ ವಂತ ಅವ್ವ. ಮಲ್ಲಾರ ಕುಟುಂಬದಲ್ಲಿ ಸೊಸೆಯಾಗಿ ಹನ್ನೊಂದು ಮಕ್ಕಳಿಗೆ ತಾಯಿಯಾಗಿ, ಅವ್ವನಾಗಿ ಎಲ್ಲರನ್ನು ಬೆಳಸಿದರು ಎಂದರು. ಶಿಕ್ಷಕ ರಾಮಕೃಷ್ಣ ಮಲ್ಲಾರ ಕಾರ್ಯಕ್ರಮ ನಿರೂಪಿಸಿದರು. ಬಂದಿರುವ ಪ್ರಾರ್ಥನೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

ಕಾರ್ಯಕ್ರಮದಲ್ಲಿ ಮೃತರ ಮಕ್ಕಳಾದ
ಮೃತರು ಪುತ್ರರಾದ ಎಂ.ಮಾಧವ ಗೌಡ, ವಾಸುದೇವ ಗೌಡ ಮಲ್ಲಾರ, ಗಂಗಾಧರ ಗೌಡ ಏನೆಕಲ್ಲು, ಸೀತಾರಾಮ ಮಲ್ಲಾರ, ನೀಲಪ್ಪ ಗೌಡ,ಸುಂದರ ಗೌಡ ಪುತ್ರಿಯರಾದ ಶ್ರೀಮತಿ ದಮಯಂತಿ ಕೊರಂಬಡ್ಕ, ಶ್ರೀಮತಿ ಸಾವಿತ್ರಿ ನಾಯರ್ ಕಲ್ಲು, ಶ್ರೀಮತಿ ದಿವ್ಯ ಕಿರಿಭಾಗ, ಶ್ರೀಮತಿ ರೇವತಿ ಕನಕಮಜಲು ಹಾಗೂ ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳು,ಮರಿಮಕ್ಕಳು,ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.










