ಹೈದರಾಬಾದ್ ನ ರೀಜನ್ ನ ನವೋದಯ ವಿದ್ಯಾಲಯ ಸಮಿತಿಯವರು ಇತ್ತೀಚಿಗೆ ಹಿಮಾಚಲ ಪ್ರದೇಶದ ಕಾಂಗ್ರದಲ್ಲಿ ನಡೆಸಿದ ರಾಷ್ಟ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಅವನಿ ಡಿ.ಎಸ್ ಚಿನ್ನದ ಪದಕ ಪಡೆದು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.















ಮುಡಿಪು ನವೋದಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ಸುಳ್ಯ ಬೀರಮಂಗಲದಲ್ಲಿ ನೆಲೆಸಿರುವ ಮಡಪ್ಪಾಡಿ ದೇರುಮಜಲಿನ ಶಿವರಾಮ ಡಿ. ಮತ್ತು ರೂಪಶ್ರೀ ಎಸ್ ದಂಪತಿಗಳ ಪುತ್ರಿ.










