ಮೊಗರ್ಪಣೆ: ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಜಲಾಲಿಯಾ ರಾತೀಬ್ ಸ್ಥಾಪನೆ

0

ಅಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಲ್ ನೇತೃತ್ವ

ಮೊಗರ್ಪಣೆ ಮುಹಿಯದ್ದೀನ್ ಜುಮಾ ಮಸ್ಜಿದ್ ನಲ್ಲಿ ಜಲಾಲಿಯ ರಾತೀಬ್ ಸ್ಥಾಪನೆ ಕುಂಬೋಲ್ ಮನೆ ತನದ ಹಿರಿಯ ವಿದ್ವಾಂಸ ಸಯ್ಯಿದ್ ಆಟಕೋಯ ತಂಙಳ್ ಕುಂಬೋಲ್ ರವರ ನೇತೃತ್ವದಲ್ಲಿ ಆಗಸ್ಟ್ 31ರಂದು ಮಸೀದಿಯಲ್ಲಿ ನಡೆಯಿತು.

ರಾತೀಬ್ ಮಜ್ಲಿಸ್ ನಡೆಸಿ ಮಾತನಾಡಿದ ತಂಙಳ್ ರವರು ‘ಈ ಒಂದು ಕಾರ್ಯಕ್ರಮ ಇಲ್ಲಿ ನೆಲೆ ನಿಲ್ಲಿಸುವ ಕಾರಣದಿಂದ ಇಡೀ ಊರಿನ ಕಷ್ಟ ಕಾರ್ಪಣ್ಯಗಳು ದೂರವಾಗಿ ಸದಾ ಶಾಂತಿ ಸೌಹಾರ್ದತೆ ನೆಮ್ಮದಿ ಮತ್ತು ಅಭಿವೃದ್ಧಿ ನೆಲೆಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಎಚ್ ಐ ಜೆ ಕಮಿಟಿ ಅಧ್ಯಕ್ಷ ಜಿ ಇಬ್ರಾಹಿಂ ಹಾಜಿ ಸೀ ಫುಡ್ ಅಧ್ಯಕ್ಷತೆ ವಹಿಸಿದ್ದರು.

ಸ್ಥಳೀಯ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಕಾಮಿಲ್ ಮುದುಗಡ ಉಸ್ತಾದ್ ರವರು ಉಪದೇಶ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಸಯ್ಯಿದ್ ಮಾಂಬ್ಳಿ ತಂಗಳ್ ರವರ ದರ್ಗಾದಲ್ಲಿ ಝಿಯಾರತ್ ನಡೆಯಿತು.

ವೇದಿಕೆಯಲ್ಲಿ ಸಯ್ಯಿದ್ ಝೖನುಲ್ ಆಬಿದೀನ್ ತಂಙಳ್ ಜಯನಗರ,ಶಮೀರ್ ನಈಮಿ ಖತೀಬರು ಜುಮಾ ಮಸೀದಿ ಪೈಚಾರು,ಹಾಮಿದ್ ಹಿಮಮಿ ಖತೀಬರು ಅನ್ಸಾರಿಯಾ,ಅಬ್ದುಲ್ ಕರೀಂ ಸಖಾಫಿ ಸದರ್ ಮುಅಲ್ಲಿಂ ಮೊಗರ್ಪಣೆ,ಅಬ್ದುಲ್ ಮನ್ನಾನ್ ಹಝರತ್ ಅಂಬೆಟಡ್ಕ,ಅಬ್ದುಲ್ ಲತೀಫ್ ಸಖಾಫಿ ಸದರ್ ಮುಅಲ್ಲಿಂ ಜಟ್ಟಿಪಳ್ಳ,ಫಾಯಿಝ್ ಜೊಹರಿ ಸಹಾಯಕ ಮುದರಿಸ್, ಪ್ರದಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ,ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಕೋಶಾಧಿಕಾರಿ ಮಹಮ್ಮದ್ ಆದರ್ಶ,ಹಾಜಿ ಅಬ್ದುಲ್ ಸಮದ್, ಮದರಸ ಅಧ್ಯಾಪಕ ವೃಂದ, ದರ್ಸ್ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಉದ್ಯಮಿ ಅಶ್ರಫ್ ಡಿ ಎಂ ರವರಿಂದ ತಬರುಖ್ ವಿತರಣೆ ನಡೆಯಿತು.