














ಆ.30ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ದಲ್ಲಿ 2025-26 ನೇ ಶೈಕ್ಷಣಿಕ ವರ್ಷದ ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಅಭಿವಿನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಸತೀಶ್ ಕುಮಾರ್.ಕೆ.ಆರ್ ಇವರು ವಹಿಸಿಕೊಂಡಿದ್ದರು.ರಾಮಕೃಷ್ಣ.ಕೆ. ಎಸ್ ಇವರು ಮೊದಲ ವರ್ಷದ ಸ್ವಯಂ ಸೇವಕರಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಕಾರ್ಯಕ್ರಮಾಧಿಕಾರಿಗಳು ಹೊಸ ನಾಯಕರುಗಳಾಗಿ ಅಭಿಜ್ಞಾ.ಎ.ಎಸ್,ಚೈತನ್.ಬಿ,ಯತೀಶ್.ಎಮ್.ಬಿ,ಹಂಸಿನಿ.ಪಿ.ಎಸ್ ಇವರನ್ನು ಆಯ್ಕೆ ಮಾಡಲಾಯಿತು. ಆಗಮಿಸಿದ ಅತಿಥಿಗಳನ್ನು ಡಾ.ಮೋನಿಷ.ಕೆ ಇವರು ಸ್ವಾಗತಿಸಿದರು ಮತ್ತು ಕಿಶೋರ್ ಕುಮಾರ್.ಕೆ.ಡಿ ಇವರು ಧನ್ಯವಾದ ಅರ್ಪಿಸಿದರು










