ಇತ್ತೀಚೆಗೆ ಭೀಕರ ಅಗ್ನಿ ದುರಂತಕ್ಕೆ ತುತ್ತಾದ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅರಂತೋಡು ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ. ಘಟಕ ಪುನರ್ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಆರಂತೋಡು ಪಂಚಾಯತ್ ಅಧ್ಯಕ್ಷ ರಾದ. ಕೇಶವ ಅಡ್ತಲೆ ಯವರು ಕರ್ನಾಟಕ ಸರಕಾರದ ವಿಧಾನಪರಿಷತ್ ಸದಸ್ಯ ರಾದ ಮಾನ್ಯ ಮಂಜುನಾಥ್ ಭಂಡಾರಿ ಯವರಿಗೆ ಮನವಿ ಸಲ್ಲಿಸಿದರು.









ಮನವಿಗೆ ತಕ್ಷಣ ಸ್ಪಂದಿಸಿದ ಎಂ. ಎಲ್. ಸಿ.ಯವರಾದ ಮಂಜುನಾಥ್ ಭಂಡಾರಿಯವರು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ 5ಲಕ್ಷ ಅನುದಾನ ನೀಡುವುದಾಗಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ರವೀಂದ್ರ ಪಂಜಿಕೋಡಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್. ಎಂ. ಆರ್. ಉಪಸ್ಥಿತರಿದ್ದರು.










