ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಅಂಬಾಬಾಯಿಯವರಿಂದ ಗೃಹ ರಕ್ಷಕ ದಳದ ಸಿಬ್ಬಂದಿಗೆ ಮನೆ ನಿರ್ಮಾಣಕ್ಕೆ ಧನಸಹಾಯ ಹಸ್ತಾಂತರ

0

ಜಯನಗರ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತೆ ಶ್ರೀಮತಿ ಅಂಬಾಬಾಯಿ ಯವರು ಗೃಹ ರಕ್ಷಕ ದಳದ ಸಿಬ್ಬಂದಿ ಗೀತಾ ನಾರಾಜೆ ರವರಿಗೆ ಮನೆ ನಿರ್ಮಾಣದ ಕುರಿತ ದನ ಸಹಾಯವನ್ನು ಹಸ್ತಾಂತರಿಸಿದರು.

ಈ ಧನ ಸಹಾಯದ ವಾಗ್ದಾನವನ್ನು ಅಂಬಾಬಾಯಿ ಯವರು ಸ್ವಾತಂತ್ರ್ಯ ದಿನಾಚರಣೆಯ ಒಂದು ಕಾರ್ಯಕ್ರಮದಲ್ಲಿ ವಾಗ್ದಾನವನ್ನು ಮಾಡಿದ್ದರು.

ಅದರಂತೆ ಸೆ.3 ರಂದು ಸುಳ್ಯದ ಪಾದಂ ಫುಟ್ವೇರ್ ಸಂಸ್ಥೆಯಲ್ಲಿ ಧನ ಸಹಾಯದ ಚೆಕ್ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಅಂಬಾಬಾಯಿ, ಪಾದಂ ಸಂಸ್ಥೆಯ ಪಾಲುದಾರರಾದ ಚಿದಾನಂದ,ಕೇಶವ ನಾಯಕ್, ಪ್ರದೀಪ್ ಕುಮಾರ್, ಗೌತಮಿ ಉಪಸ್ಥಿತರಿದ್ದರು.