ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಯಶೋಧರ ಕಳಂಜರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಂಡಿಗದ್ದೆಯಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಯಶೋಧರ ಕಳಂಜರವರಿಗೆ ನೇಶನ್ ಬಿಲ್ಡರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಅಶೋಕ್ ಕುಮಾರ್ ಮತ್ತು ಸುಭಾಶ್ಚಂದ್ರ ರೈ ತೋಟರವರು ಅಭಿನಂದಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದ ಕಂಬಳ, ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಕುಮಾರ್, ರೋಟರಿಯ ಝೋನಲ್ ಲೆಫ್ಟಿನೆಂಟ್ ಶಶಿಧರ್ ಶುಭ ಹಾರೈಸಿದರು.

ರೊ| ವಿಶ್ವನಾಥರವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ರೊ| ಪ್ರಶಾಂತ್ ತಂಟೆಪ್ಪಾಡಿ ಸ್ವಾಗತಿಸಿ, ರೊ| ವಿನಯಕುಮಾರ್ ಪ್ರಸ್ತಾವಿಕ ಮಾತನಾಡಿದರು. ರೊ| ಎ.ಕೆ. ಮಣಿಯಾಣಿ ಕಾರ್ಯಕ್ರಮ ನಿರ್ವಹಿಸಿ, ರೊ| ವೀರನಾಥ ವಂದಿಸಿದರು.


ಈ ಸಂದರ್ಭದಲ್ಲಿ ದುಗ್ಗಪ್ಪ ಗೌಡ ದೊಡ್ಡಮನೆ, ವಾಚಣ್ಣ ಗೌಡ ಕೆರೆಮೂಲೆ, ಚಿನ್ನಪ್ಪ ಗೌಡ ಕಾಣಿಕೆ, ಮಹೇಶ್ ಕೋಟೆ, ಈಶ್ವರ ಭಟ್ ಬೇರಿಕೆ, ರೋಟರಿ ಕ್ಲಬ್ಬಿನ ಪದ್ಮನಾಭ ಬೀಡು, ಬಾಲಕೃಷ್ಣ ಮಡ್ತಿಲ, ಊರವರು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.