ಮಂಡೆಕೋಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಎಲ್ಲಾ ಶಿಕ್ಷಕರನ್ನು ಹಾಗೂ ಬಿಸಿಯೂಟ ಸಿಬ್ಬಂದಿಗಳನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.








ಸಭಾ ಕಾರ್ಯಕ್ರಮದ ಮೊದಲು ಅಧ್ಯಾಪಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಿಕ್ಷಕರ ದಿನದ ಕಾರ್ಯಕ್ರಮದ ನಿರ್ವಹಣೆಯನ್ನು ಪೂರ್ತಿ ಶಾಲಾ ವಿದ್ಯಾರ್ಥಿಗಳೇ ನಿರ್ವಹಿಸಿರುವುದು ವಿಶೇಷವಾಗಿತ್ತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸುಳ್ಯ ರೈತೋತ್ಪಾದಕ ಕಂಪೆನಿಯ ನಿರ್ದೇಶಕಿ ಮಧುರಾ ಎಂ.ಆರ್ , ಎಸ್ ಡಿ ಎಂ ಸಿ ಉಪಾಧ್ಯಕ್ಷ ಮುರಳೀಧರ್ ರೈ, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ, ಸದಸ್ಯರಾದ ಸಾವಿತ್ರಿ ಕಣೆಮರಡ್ಕ, ಪುರುಷೋತ್ತಮ ಬೇಂಗತ್ತಮಲೆ, ದಾಮೋಧರ ಕಲ್ಲಡ್ಕ, ದಯಾನಂದ ಕಲ್ಲಡ್ಕ, ಭವ್ಯ ಮಂಡೆಕೋಲು, ಜಯಶ್ರೀ ತೋಟಪ್ಪಾಡಿ, ಭಾರತಿ ಉಗ್ರಾಣಿಮನೆ, ಜಯಶ್ರೀ ಕುಂಡಪ್ಪಾರೆ, ಪುಷ್ಪಾವತಿ ಉದ್ದಾರ ಉಪಸ್ಥಿತರಿದ್ದರು.
ಶಾಲಾ ವಿಧ್ಯಾರ್ಥಿಗಳಾದ ಸಿಂಚನ ಸ್ವಾಗತಿಸಿ, ವರಣ್ ವಂದಿಸಿದರು. ಸಾವಿತ್ರಿ ಕಣೆಮರಡ್ಕ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತನ್ನಾಡಿದರು. ಯಕ್ಷಿತಾ ಹಾಗೂ ಉಜ್ವಲ್ ಕಾರ್ಯಕ್ರಮ ನಿರೂಪಿಸಿದರು.










