ಅದ್ದೂರಿ ದಸರಾ ಆಚರಣೆ ಬಗ್ಗೆ ಸಮಾಲೋಚನೆ
ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುಳ್ಯ ದಸರಾ ಉತ್ಸವ ಸಮಿತಿ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತುಶಾರದಾಂಬಾ ಸಮೂಹ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಮಿತಿಯ ಸರ್ವ ಸದಸ್ಯರ ಸಭೆ ಸೆ. ೧೦ರಂದು ಸಂಜೆ ನಡೆಯಿತು.
ವಿಶ್ವ ವಿಖ್ಯಾತ ಮೈಸೂರು ದಸರಾ, ಮಡಿಕೇರಿ ದಸರಾ ಮಾದರಿಯಲ್ಲಿ ಅದ್ದೂರಿಯಾಗಿ ಸುಳ್ಯ ದಸರಾ ನಡೆಯುವಂತಾಗಬೇಕು ಅದಕ್ಕೆ ಎಲ್ಲರ ಸಹಕಾರ ಬೇಕು ಎಂದು ಸುಳ್ಯ ದಸರಾ ಉತ್ಸವ ಸಮಿತಿಯ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಶಾರದಾಂಬಾ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಲೀಲಾಧರ್ ಡಿ.ವಿ. ಮಾತನಾಡಿ, ಈ ಬಾರಿ ಸುಳ್ಯ ದಸರಾ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಲು ಎಲ್ಲಾ ತಯಾರಿ ನಡೆಸಲಾಗಿದೆ. ತಮ್ಮೆಲ್ಲರ ಸಹಕಾರದಿಂದ ಉತ್ಸವ ಯಶಸ್ವಿಯಾಗಬೇಕಿದೆ. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯಕ್ರಮ ನಡೆಸಬೇಕಾಗಿರುವುದರಿಂದ ಎಲ್ಲಾ ಸಂಘ ಸಂಸ್ಥೆಗಳು ಸಹಕಾರ ನೀಡಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.
ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ೫೪ನೇ ವರ್ಷದ ಸುಳ್ಯ ದಸರಾ ೨೦೨೫ ಸೆ.೨೯ರಂದು ಪ್ರಾರಂಭಗೊಂಡು ಅ. ೦೭ರ ವರೆಗೆ ೯ದಿನಗಳ ಕಾಲ ನಡೆಯಲಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜನೆ ಬಗ್ಗೆ ಮಾಹಿತಿ ನೀಡಿದರು.








ಸುಳ್ಯ ಪೊಲೀಸ್ ಠಾಣಾಧಿಕಾರಿ ಸಂತೋಷ್ ಮಾತನಾಡಿ ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಇಲಾಖೆಯ ಸುತ್ತೋಲೆ ಇರುವುದರಿಂದ ರಾತ್ರಿ ೧೦ ಗಂಟೆಯಿಂದ ಧ್ವನಿವರ್ಧಕ ಉಪಯೋಗಿಸುವಂತಿಲ್ಲ. ಆದುದರಿಂದ ಸಂಘಟಕರು ಮತ್ತು ಸಾರ್ವಜನಿಕರು ಸಹಕರಿಸಬೇಕು. ಶಾಂತಿಯುತ ಶೋಭಯಾತ್ರೆ ನಡೆಸಲು ಸಹಕರಿಸುವ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ದಸರಾ ಉತ್ಸವದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಯಿತು.
ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ. ಗೋಕುಲ್ ದಾಸ್, ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್ ಶಾರದಾಂಬ ಮಹಿಳಾ ಸಮಿತಿಯ ಅಧ್ಯಕ್ಷೆ ಲತಾ ಮಧುಸೂಧನ್, ಗೌರವಾಧ್ಯಕ್ಷೆ ಡಾ. ಯಶೋಧಾ ರಾಮಚಂದ್ರ, ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಖಜಾಂಜಿ ಸುನಿಲ್ ಕೇರ್ಪಳ, ದಸರಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ ಕೆ ಸತೀಶ್, ಶಾರದಾಂಬಾ ಉತ್ಸವ ಸಮಿತಿಯ ಉಪಾಧ್ಯಕ್ಷ ಡಾ.ಉಜ್ವಲ್ ಯು.ಜೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಕೋಶಾಧಿಕಾರಿ ಬೆಳ್ಯಪ್ಪ ಗೌಡ, ಗೌರವ ಸಲಹೆಗಾರರಾದ ಎಂ. ವೆಂಕಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ಶಾರದಾಂಬ ಸಮೂಹ ಸಮಿತಿಗಳ ಪದಾಧಿಕಾರಿಗಳಾದ ಹರೀಶ್ ಕಂಜಿಪಿಲಿ, ರಾಧಾಕೃಷ್ಣ ಬೊಳ್ಳೂರು, ಗಣೇಶ್ ಆಳ್ವ, ಶಿವನಾಥ ರಾವ್, ತೀರ್ಥರಾಮ ಜಾಲ್ಲೂರು, ಡಿ.ಎಸ್.ಗಿರೀಶ್, ಅನಿಲ್ ಕುಮಾರ್ ಕೆ.ಸಿ, ಅನೂಪ್ ಪೈ, ಭವಾನಿಶಂಕರ ಕಲ್ಮಡ್ಕ ಚೇತನ್ ಕಜೆಗದ್ದೆ, ಲೋಕೇಶ್ ಊರುಬೈಲು, ಜನಾರ್ಧನ ದೋಳ, ಪ್ರಸಾದ್ ಕಾಟೂರು, ವಿನಯ ಬೆದ್ರುಪಣೆ, ಶಿಲ್ಪಾ ಸುದೇವ್, ಜಿನ್ನಪ್ಪ ಪೂಜಾರಿ, ಚಂದ್ರಶೇಖರ ಪಂಡಿತ್, ಸತ್ಯಕುಮಾರ್ ಆಡಿಂಜ, ಲತೀಶ್ ಗುಂಡ್ಯ, ಕುಸುಮಾಧರ ಬೂಡು, ಸತ್ಯಕುಮಾರ್ ಆಡಿಂಜ, ಲತಾ ಬೂಡು, ಪ್ರದೀಪ್ ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.








